Breaking
17 Feb 2026, Tue

ಶಿಖಾ ಸುಶೀಲ್‌ಗೆ ‘ಹಿಸ್ನಾ ಮಿಸ್ ದಾಯ್ಜಿವರ್ಲ್ಡ್ – 2026’ ಕಿರೀಟ

ಮಂಗಳೂರು: ಮಿಲಾಗ್ರಿಸ್ ಸಭಾಭವನದಲ್ಲಿ ಫೆ. 14 ರಂದು ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಶಿಖಾ ಸುಶೀಲ್ ಅವರು ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್ – 2026 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ದೇಶ ವಿದೇಶಗಳಿಂದ ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ದ್ವಿತೀಯ ಹಂತಕ್ಕೆ ಇಪ್ಪತ್ತೈದು ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆತ್ಮಸ್ಥೈರ್ಯ, ಸ್ವಪರಿಚಯ, ರ‍್ಯಾಂಪ್ ವಾಕ್, ಪ್ರಶ್ನೋತ್ತರ ಹಾಗೂ ಎಕ್ಸ್ ಫಾಕ್ಟರ್ ವಿಭಾಗಳಲ್ಲಿ ಮಿಂಚಿದ ಶಿಖಾ ಸುಶೀಲ್ ಅವರು ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್ ಕಿರೀಟಕ್ಕೆ ಭಾಜನರಾದರು.

ಸೆರೆನಾ ಎವ್ಜಿನ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರೆ, ಫೇ ಮಾರ್ಟಿಸ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನಾರದರು.

ಹಿಸ್ನಾ ಇಂಟರ್‌ನ್ಯಾಶನಲ್ ನಿರ್ದೇಶಕರಾದ ರೊನಾಲ್ಡ್ ಪಿಂಟೊ ಹಾಗೂ ಅವರ ಪತ್ನಿ ದೊರೊತಿ ಪಿಂಟೊ ವಿಜೇತರನ್ನು ಕಿರೀಟದೊಂದಿಗೆ ಕ್ರಮವಾಗಿ ಮೂರು ಲಕ್ಷ, ಎರಡು ಲಕ್ಷ ಮತ್ತು ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಿದರು. ಅಂತಿಮ ಸುತ್ತಿಗೆ ಪ್ರವೇಶಿಸಿದ ಇತರ ಒಂಬತ್ತು ಸ್ಪರ್ಧಿಗಳು ವೈಯಕ್ತಿಕ ಬಿರುದುಗಳೊಂದಿಗೆ ತಲಾ 25 ಸಾವಿರ ರೂಪಾಯಿ ನಗದು ಬಹುಮಾನ ಪಡೆದರು.

Leave a Reply

Your email address will not be published. Required fields are marked *