Breaking
21 Sep 2026, Mon

ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಪಾಣೆಮಂಗಳೂರು ವಲಯದ ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪ ನಡು ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆಪ್ಟೆಂಬರ್ 20 ಭಾನುವಾರ ಶ್ರೀ ಮಾಚಿದೇವ ಸಭಾಭವನ ಕಂದೂರು ಇಲ್ಲಿ ಜರಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸ್ಥಾಪಕ ಅಧ್ಯಕ್ಷರಾದ ಎಸಿ ಭಂಡಾರಿ ವಹಿಸಿದ್ದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀರಕಂಭ ಮಜಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ನಡೆಸುತ್ತಿರುವ ಕಾರ್ಯಕ್ರಮಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತಿದ್ದು, ಗ್ರಾಮೀಣ ಭಾಗದ ಜನತೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.


ಕೇಂದ್ರ ಕಚೇರಿ ಧರ್ಮಸ್ಥಳ ಜ್ಞಾನವಿಕಾಸ ವಿಭಾಗ ನಿರ್ದೇಶಕ ದಿನೇಶ್ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿಯ ಹಸ್ತಾoತರ ಮಾಡಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು ಯೋಜನೆ ಮುಖಾಂತರ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು.


ಭಾರತೀಯ ಜೀವ ವಿಮಾ ವಿಭಾಗ ಉಡುಪಿಯ ಮ್ಯಾನೇಜರ್ ಸೋಮ ಸುಂದರ್ ಯೋಜನೆಯ ಮುಖಾಂತರ ಮಾಡುವ ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಸಿ ಭಂಡಾರಿ ಅವರನ್ನು ಹಾಗೂ ಒಕ್ಕೂಟಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಹಾಗೂ ಆಯ್ಕೆಯಾದ ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಆದೇಶ ಪತ್ರ ವಿತರಿಸಲಾಯಿತು.


ಸಭಾ ಕಾರ್ಯಕ್ರಮದ ಮೊದಲು ಸಜೀಪ ಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಪುರೋಹಿತದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಜರಗಿತು. ಸಚಿಪ ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್, ಉದ್ಯಮಿ ಶ್ರೀಕಾಂತ್ ಶೆಟ್ಟಿ ಸಂಕೇಶ, ನಂದಾವರ ಶ್ರೀ ವಿನಾಯಕ ಶಂಕರ್ ನಾರಾಯಣ, ದುರ್ಗಾಂಬ ಕ್ಷೇತ್ರದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿ ಗುತ್ತು, ಬಾಲ ಗಣಪತಿ ದೇವಸ್ಥಾನ ಅನ್ನಪ್ಪಡಿ ಸಜೀಪ ಮೂಡ ಅಧ್ಯಕ್ಷ ಯಶವಂತ ದೇವರಾಜೆ ಗುತ್ತು, ಸಜೀಪ ಮೂಢ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಾಡ.ಕೂಡೂರು ತಾಲೂಕು ಯೋಜನಾಧಿಕಾರಿ ಜಯನಂದ ಪಿ , ಶಿವ ಖಂಡಿಗ, ಎಮ್. ಗಂಗಾಧರ ಭಂಡಾರಿ, ಹರಿಣಾಕ್ಷಿ, ಹೇಮಾವತಿ, ನೂತನ ಒಕ್ಕೂಟದ ಅಧ್ಯಕ್ಷರುಗಳಾದ ಪುರಂದರ, ಮುರಳಿದರ ಭಟ್, ನಾಗೇಶ್, ಶಶಿಕಲಾ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಬಬಿತ ಒಕ್ಕೂಟ ಸಾಧನ ವರದಿ ವಾಚಿಸಿದರು. ಸೇವಾ ಪ್ರತಿನಿಧಿ ಬೇಬಿ ಸ್ವಾಗತಿಸಿ, ಸೇವಾ ಪ್ರತಿನಿಧಿ ನಿರ್ಮಲ ಸನ್ಮಾನ ಪತ್ರ ವಾಚಿಸಿದರು. ವಲಯ ಮೇಲ್ವಿಚಾರಕಿ ಶಿವಲಕ್ಷ್ಮಿ ವಂದಿಸಿದರು. ಸುಬ್ರಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *