Breaking
5 Nov 2026, Thu

ಬಂಟ್ವಾಳ ಎಲ್ಐಸಿ ಪ್ರತಿನಿಧಿಗಳ ಸಂಘದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆ

ಬಂಟ್ವಾಳ: ಇಲ್ಲಿನ ಬಂಟ್ವಾಳ ಎಲ್ಐಸಿ ಶಾಖೆಗೆ ಸಂಬಂಧಿಸಿದ ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪ್ರತಿನಿಧಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ದಕ್ಷಿಣ ಮಧ್ಯ ವಲಯದ ಉಪಾಧ್ಯಕ್ಷ ಎ.ಎಸ್. ಲೋಕೇಶ್ ಶೆಟ್ಟಿ ಧರ್ಮಸ್ಥಳ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಸಂಘದ ಗೌರವಾಧ್ಯಕ್ಷರಾಗಿ ಚಿತ್ತರಂಜನ್ ಎನ್.ಎಸ್., ಉಪಾಧ್ಯಕ್ಷರಾಗಿ ಮೋಹನ್ ಕೆ. ಶ್ರೀಯಾನ್ ರಾಯಿ ಮತ್ತು ಚಂದ್ರಶೇಖರ ಅಲ್ಲಿಪಾದೆ, ಪ್ರಧಾನ ಕಾರ್ಯದರ್ಶಿಯಾಗಿ ಭವಾನಿ ಕೆ., ಜೊತೆ ಕಾರ್ಯದರ್ಶಿಯಾಗಿ ಸದಾನಂದ ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ರಘುರಾಮ ಪೈ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೋಹಿದಾಸ್ ಕುಂದರ್, ನವೀನ್ ಕೊಡ್ಮಾಣ್, ಪ್ರಕಾಶ್ಚಂದ್ರ ಆಳ್ವ, ಪ್ರಕಾಶ್ ಪೂಜಾರಿ, ಸಂಕಪ್ಪ ಪಿ., ವಸಂತ ಪ್ರಭು, ಆನಂದ ಸಾಲ್ಯಾನ್, ಮೋನಪ್ಪ ಪೂಜಾರಿ, ಮಹಮ್ಮದ್ ಫಾರೂಕ್, ಸಂಜೀವ ಸರಪಾಡಿ, ಲೋಕೇಶ ಪೂಜಾರಿ, ದಿನಕರ ಮುಡಿಪು ಹಾಗೂ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *