Breaking
4 Nov 2026, Wed

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ: ಮೂರು ದಿನಗಳಲ್ಲಿ 95 ರೂ. ಹೆಚ್ಚಳ; ಬೆಳ್ಳಿ ದರ ಸ್ಥಿರ

ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಮುಂದುವರಿದಿದ್ದು, ಬುಧವಾರ ಪ್ರತಿ ಗ್ರಾಂಗೆ 25 ರೂ. ಹೆಚ್ಚಳವಾಗಿದೆ. ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆ ಒಟ್ಟು 95 ರೂ. ಏರಿಕೆಯಾಗಿದೆ. ಆದರೆ, ವಿದೇಶಿ ಮಾರುಕಟ್ಟೆಗಳ ಬಹುತೇಕ ಕಡೆಗಳಲ್ಲಿ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಎಂಸಿಎಕ್ಸ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಮಾತ್ರ ಬೆಲೆ ಸ್ವಲ್ಪ ಏರಿಕೆಯಾಗಿದೆ.


ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,28,250 ರೂ. ಆಗಿದ್ದರೆ, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 1,39,910 ರೂ. ಇದೆ.
ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರಸ್ತುತ 100 ಗ್ರಾಂ ಬೆಳ್ಳಿಯ ಬೆಲೆ 20,000 ರೂ. ಆಗಿದೆ.


ಬೆಂಗಳೂರಿನಲ್ಲೂ ಚಿನ್ನದ ಬೆಲೆ ಏರಿಕೆ
ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,28,250 ರೂ. ಇದ್ದು, 100 ಗ್ರಾಂ ಬೆಳ್ಳಿಯ ಬೆಲೆ 20,000 ರೂ. ಇದೆ. ತಮಿಳುನಾಡು ಹಾಗೂ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ 100 ಗ್ರಾಂಗೆ 20,500 ರೂ. ತಲುಪಿದೆ.

Leave a Reply

Your email address will not be published. Required fields are marked *