ಬಂಟ್ವಾಳ: ಹೊಕ್ಕಾಡಿಗೋಳಿ ಮಹಿಷ ಮರ್ಧಿನಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ವತಿಯಿಂದ ಸಮಿತಿಯ ಗೌರವ ಸಲಹೆಗಾರರಾಗಿದ್ದ, ಇತ್ತೀಚೆಗೆ ನಿಧನರಾದ ಕಂಬಳ ಕೋಣಗಳ ಯಜಮಾನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಸಮೀಪದ ಹೊಂಗಾರಹಿತ್ಲು ನಿವಾಸಿ ಕಾಂತಣ್ಣ ಶೆಟ್ಟಿ ಹೊಂಗಾರಹಿತ್ಲು ಅವರಿಗೆ ನುಡಿ ನಮನ ಕಾರ್ಯಕ್ರಮ ಹೊಕ್ಕಾಡಿಗೋಳಿ ಕಂಬಳ ಗದ್ದೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿ, ಕಾಂತಣ್ಣ ಶೆಟ್ಟಿ ಅವರು ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಂಬಳ ಕೋಣಗಳ ಯಜಮಾನರಾಗಿ ಹಾಗೂ ಕಂಬಳದ ಪ್ರೋತ್ಸಾಹಕರಾಗಿ ಅಪಾರ ಅನುಭವ ಹೊಂದಿದ್ದರು. ಅವರ ನಿಧನ ಸಮಿತಿ ಮಾತ್ರವಲ್ಲದೆ ಇಡೀ ಕಂಬಳ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಪದಾಧಿಕಾರಿಗಳಾದ ಪ್ರಭಾಕರ ಹುಲಿಮೇರು, ರಾಜೇಶ್ ಜಿ. ಶೆಟ್ಟಿ, ಪುಷ್ಪರಾಜ್ ಜೈನ್, ಸತೀಶ್ ಮಠ, ಸಂತೋಷ್ ಶೆಟ್ಟಿ ಕೊನೆರೊಟ್ಟು, ಸುರೇಂದ್ರ ಪೂಜಾರಿ ಹಾಗೂ ಸ್ಥಳದಾನಿಗಳಾದ ಸುಧೀರ್ ಶೆಟ್ಟಿ, ರಾಜು ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಮೂಲ್ಯ, ರಮೇಶ್ ಮೂಲ್ಯ, ಸುಂದರ ಪೂಜಾರಿ, ಭುಜಂಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





