Breaking
3 Nov 2026, Tue

ಪುಟ್ಟ ಮಗು ಆರಾಧ್ಯಳ ಚಿಕಿತ್ಸೆಗೆ ₹75,630 ಧನಸಹಾಯ ಹಸ್ತಾಂತರ

ಮಂಗಳೂರು: ಪಚ್ಚನಾಡಿಯ ಆರತಿ ಮಲ್ಲಪ್ಪ ಅವರ ನಾಲ್ಕು ತಿಂಗಳ ಹೆಣ್ಣು ಮಗು ಆರಾಧ್ಯಳ ಆರೋಗ್ಯ ನಿಧಿಗೆ ವಾಯುಪುತ್ರ ಸೇವ್ ಲೈಫ್ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ವತಿಯಿಂದ ₹75,630 ಧನಸಹಾಯವನ್ನು ಹಸ್ತಾಂತರಿಸಲಾಯಿತು.

ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಸೇವಾ ಮಾಣಿಕ್ಯರ ಮೂಲಕ ಧನಸಹಾಯದ ಚೆಕ್ ಅನ್ನು ಮಗುವಿನ ಆರೋಗ್ಯ ನಿಧಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

ಮಗುವಿನ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನಕ್ಕೆ ಸ್ಪಂದಿಸಿದ ಹಾಗೂ ಧನಸಹಾಯ ನೀಡಿದ ಎಲ್ಲಾ ದಾನಿಗಳಿಗೆ ವಾಯುಪುತ್ರ ಸೇವ್ ಲೈಫ್ ಟ್ರಸ್ಟ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *