ಮಂಗಳೂರು: ಕುದ್ರೋಳಿ ದಸರಾ ಉತ್ಸವ 2026ರ ಅಂಗವಾಗಿ ಪ್ರದರ್ಶನಗೊಂಡ ‘ಭಕ್ತ ಕುಂಬಾರ’ ನೃತ್ಯರೂಪಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಗೌರವ ದೊರೆತಿದೆ.

ಈ ಹಿನ್ನೆಲೆಯಲ್ಲಿ ಕುಲಾಲೇರ್ ಕುಡ್ಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕ ಹಾಗೂ ಕುಲಾಲ ಸಂಘ ಬೆಳ್ತಂಗಡಿಯ ಅಧ್ಯಕ್ಷರಾದ ಸೋಮಯ್ಯ ಹನೈನಡೆ ಅವರಿಂದ ಜಯಗಣೇಶ್ ಬಂಗೇರ ಕಲ್ಲಡ್ಕ ಅಭಿನಂದನಾ ಪತ್ರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಭಾಗವಹಿಸಿದ ಕಲಾವಿದರಿಗೆ ಕೂಲಲೇರ್ ಚಾರಿಟೇಬಲ್ ಟ್ರಸ್ಟ್ ರಿ ಮಂಗಳೂರು ಇದರ ವತಿಯಿಂದ ಅಭಿನಂದನ ಪತ್ರ ನೀಡಲಾಯಿತು.





