Breaking
31 Oct 2026, Sat

ರಂಗ ನಿರ್ದೇಶಕ ಎಚ್.ಕೆ. ನಯನಾಡು ಅವರಿಗೆ ‘ಸಮಾಜ ರತ್ನ’ ಪ್ರಶಸ್ತಿ ಪ್ರದಾನ

ಬಂಟ್ವಾಳ: ರಂಗ ನಿರ್ದೇಶಕ, ನಟ ಹಾಗೂ ಸಾಹಿತಿ ಎಚ್.ಕೆ. ನಯನಾಡು ಅವರಿಗೆ ಕುಡ್ಲ ಕುಲಾಲೆರ್ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಸಮಾಜ ರತ್ನ’ ಬಿರುದು ನೀಡಿ ಗೌರವಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ಅವರ ನೇತೃತ್ವದಲ್ಲಿ ಬಂಟ್ವಾಳದ ಪಣೆಕಲೆ ಪಡ್ಲುವಿನಲ್ಲಿರುವ ಎಚ್.ಕೆ. ನಯನಾಡು ಅವರ ನಿವಾಸ ‘ಅಮೂಲ್ಯ’ದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವಾಭಿನಂದನಾ ಕಾರ್ಯಕ್ರಮ ನಡೆಯಿತು.

ನಾಟಕಕಾರ, ಕಲಾವಿದ, ರಂಗ ನಿರ್ದೇಶಕ ಹಾಗೂ ಕಂಚಿನ ಕಂಠದ ನಿರೂಪಕರಾಗಿ ಗುರುತಿಸಿಕೊಂಡಿರುವ ಎಚ್.ಕೆ. ನಯನಾಡು ಅವರು ವಿವಿಧ ಸಂಘಟನೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಕುಡ್ಲ ಕುಲಾಲೆರ್ ಸೇವಾ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಪ್ರದರ್ಶಿಸಲಾದ ‘ಭಕ್ತ ಕುಂಬಾರ’ ದೃಶ್ಯರೂಪಕವನ್ನು ನಿರ್ದೇಶಿಸುವುದರ ಜತೆಗೆ ಹಿನ್ನೆಲೆ ಧ್ವನಿಯನ್ನೂ ನೀಡಿದ್ದಾರೆ.

ಈ ದೃಶ್ಯರೂಪಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿ ಗಮನ ಸೆಳೆದಿತ್ತು. ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಟ್ರಸ್ಟ್ ವತಿಯಿಂದ ಈ ಗೌರವ ನೀಡಲಾಗಿದೆ. ಇದೇ ಸಂದರ್ಭದಲ್ಲಿ ದೃಶ್ಯರೂಪಕದಲ್ಲಿ ಅಭಿನಯಿಸಿದ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ, ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ಮೋಹನ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್, ಪುತ್ತೂರು ಕುಂಭಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಟ್ರಸ್ಟಿ ಭಾಸ್ಕರ ಎಂ. ಪೆರುವಾಯಿ, ಕುಲಾಲ ಕುಂಬಾರರ ಯುವ ವೇದಿಕೆಯ ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಮಳಲಿ ಕುಂಬಾರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಟ್ರಸ್ಟಿ ಸುಂದರ ಬಂಗೇರ, ಟ್ರಸ್ಟ್ ಕಾರ್ಯದರ್ಶಿ ಶೇಷಪ್ಪ ಟಿ. ಮೂಲ್ಯ, ಟ್ರಸ್ಟಿಗಳಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಸೋಮಯ್ಯ ಹನೈನಡೆ, ಚಂದ್ರಹಾಸ ಪಲ್ಲಿಪ್ಪಾಡಿ, ಭಾಸ್ಕರ ಅಜೆಕಲ, ಆರ್.ಕೆ. ಪೃಥ್ವಿರಾಜ್ ಎಡಪದವು ಉಪಸ್ಥಿತರಿದ್ದರು.

ಕುಲಾಲ ಸಮುದಾಯದ ಪ್ರಮುಖರಾದ ನಾರಾಯಣ ಸಿ. ಪೆರ್ನೆ, ನಾಗೇಶ್ ಬಾಳೆಹಿತ್ಲು, ಸೋಮನಾಥ ಕುಲಾಲ್, ಮಾಧವ ಕುಲಾಲ್ ಬಿ.ಸಿ.ರೋಡು, ಭಾಸ್ಕರ್ ಕೊಳ್ನಾಡು, ಮನೋಹರ ನೇರಂಬೋಳು, ಸದಾನಂದ ಬಿ. ಬಂಗೇರ, ಜಯಗಣೇಶ್ ಬಂಗೇರ, ರಾಜೇಶ್ ಭಂಡಾರಿಬೆಟ್ಟು, ಗಣೇಶ್ ಕಾರಂಬಡೆ ಹಾಗೂ ಸತೀಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *