Breaking
31 Oct 2026, Sat

ಪುತ್ತೂರಿನಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ದಿಢೀರ್ ಸಾವು

ಪುತ್ತೂರು: ಮನೆಯಲ್ಲಿ ಅಣ್ಣಂದಿರೊಂದಿಗೆ ಆಟವಾಡುತ್ತಾ ಸಂತಸದಿಂದ ಕಾಲ ಕಳೆಯಬೇಕಿದ್ದ ಎರಡು ವರ್ಷದ ಕಂದಮ್ಮ ಅಸ್ವಸ್ಥಗೊಂಡು ದಿಢೀರ್ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆಸ್ಟಿನ್ (2) ಎಂಬ ಮಗು ಅಕ್ಟೋಬರ್ 29ರಂದು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಆಸ್ಟಿನ್‌ನನ್ನು ಅಕ್ಟೋಬರ್ 28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದೆ. ಚಿಕಿತ್ಸೆ ಬಳಿಕ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆತರಲಾಗಿತ್ತು.

ಆದರೆ, ಮರುದಿನ ಮುಂಜಾನೆ ಎಂದಿನಂತೆ ಎದ್ದು ಸ್ವಲ್ಪ ಹೊತ್ತು ಆಟವಾಡುತ್ತಿದ್ದ ಮಗು ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಎಳೆಯ ವಯಸ್ಸಿನಲ್ಲೇ ಮಗುವನ್ನು ಕಳೆದುಕೊಂಡ ಕುಟುಂಬದ ದುಃಖ ಹೇಳತೀರದಾಗಿದೆ. ಪುಟ್ಟ ಕಂದಮ್ಮನ ಅಕಾಲಿಕ ನಿಧನದಿಂದ ಸ್ಥಳೀಯ ಪ್ರದೇಶದಲ್ಲೂ ಶೋಕ ಆವರಿಸಿದೆ.

Leave a Reply

Your email address will not be published. Required fields are marked *