ಬಂಟ್ವಾಳ: ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ, ಸ್ವಾಭಿಮಾನ ಮತ್ತು ಸಮಾನತೆಯ ಪ್ರಮುಖ ಸಾಧನವಾಗಿ ಶ್ರೀ ನಾರಾಯಣಗುರುಗಳು ಪ್ರತಿಪಾದಿಸಿದ್ದರು. ಜಾತಿ-ಧರ್ಮದ ಭೇದಭಾವಗಳನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಮಾನವೀಯ ಸಂದೇಶ ಸಾರಿದ ಅವರು, ಜ್ಞಾನದ ಮೂಲಕ ಅಜ್ಞಾನ ಮತ್ತು ಸಾಮಾಜಿಕ ಅಸಮಾನತೆಗಳನ್ನು ನಿವಾರಿಸಲು ಕರೆ ನೀಡಿದ್ದರು ಎಂದು ನಿರೂಪಕ ರಾಜೇಶ್ ಬಲ್ಯ ತಿಳಿಸಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುವಾರ (ಅ. 29) ನಗ್ರಿಯ ಲತಾ ಹರೀಶ್ ಪೂಜಾರಿ ಅವರ ನಿವಾಸದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 84 ಕಾರ್ಯಕ್ರಮದಲ್ಲಿ ಅವರು ಗುರುಸಂದೇಶ ನೀಡಿದರು.
ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಒಂದಕ್ಕೊಂದು ಪೂರಕವಾದಾಗ ಮಾತ್ರ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯ ನೆಲೆಸಲು ಸಾಧ್ಯ. ಶ್ರೀ ನಾರಾಯಣಗುರುಗಳ ಚಿಂತನೆಗಳು ಇಂದಿನ ಸಮಾಜಕ್ಕೂ ಜ್ಞಾನದ ಬೆಳಕು ಹಾಗೂ ಮಾನವೀಯತೆಯ ದಾರಿದೀಪವಾಗಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಸುಭಾಷ್ ನಗರದ ಅಧ್ಯಕ್ಷ ಮೋಹನ್ ದಾಸ್ ಪೂಜಾರಿ ಸಜಿಪ, ಶ್ರೀ ಶಾರದಾ ಮಂದಿರದ ಮಾಜಿ ಅಧ್ಯಕ್ಷ ರತ್ನಾಕರ ಪೂಜಾರಿ, ನಾಡಾರ್ ಯುವಕ ಮಂಡಲದ ಅಧ್ಯಕ್ಷ ನಾಗೇಶ್ ಪೂಜಾರಿ ಕೊಟ್ಟಾರಿಪಾಲು, ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ದ್ವಿತೀಯ ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಅಜೆಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಹಾಗೂ ನವೀನ್ ಕಾರಾಜೆ ಉಪಸ್ಥಿತರಿದ್ದರು.

ಘಟಕದ ಸದಸ್ಯರಾದ ಯಶೋಧರ ಕಡಂಬಳಿಕೆ, ಯತೀಶ್ ಬೊಳ್ಳಾಯಿ, ಸಂತೋಷ್ ಪೂಜಾರಿ ವಿಟ್ಲುಕೋಡಿ, ಶ್ರೇಯಾ ನಗ್ರಿ, ಆನಂದ ಪೂಜಾರಿ ಹಾಗೂ ಸೃಜನಿ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ರಾಜೇಶ್ ಸುವರ್ಣ, ಶಿವಾನಂದ್ ಎಂ., ಅರುಣ್ ಮಹಾಕಾಳಿ ಪಡ್ಪು ಹಾಗೂ ನಾಗೇಶ್ ಪೊನ್ನೋಡಿ ಉಪಸ್ಥಿತರಿದ್ದರು.
ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ, ಪೂರ್ವಿಕಾ, ತೇಜಸ್ ಹಾಗೂ ಭಜಕರಾದ ವಿನಯ್ ಆಚಾರ್ಯ ಸಂಗೀತ ಸೇವೆ ಸಲ್ಲಿಸಿದರು. ಆತಿಥ್ಯ ವಹಿಸಿದ ಹರೀಶ್ ಪೂಜಾರಿ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು. ಘಟಕದ ಅಧ್ಯಕ್ಷ ಕಿರಣ್ ಪೂಂಜರಕೊಡಿ ಕಾರ್ಯಕ್ರಮ ನಿರೂಪಿಸಿದರು.



