Breaking
31 Oct 2026, Sat

ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಸೃಷ್ಟಿ ಪಿ. ಹೊಳ್ಳಗೆ ಅತ್ಯುನ್ನತ ಶ್ರೇಣಿ

ಬಂದಾರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು 2026ರ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೆರ್ಲ–ಬೈಪಾಡಿ ನಿವಾಸಿ ಸೃಷ್ಟಿ ಪಿ. ಹೊಳ್ಳ ಅವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಭರತನಾಟ್ಯ ತರಬೇತಿಯನ್ನು ವಿದುಷಿ ಅಮೃತ ಆಚಾರ್ಯ ಕೊಯ್ಯೂರು ಹಾಗೂ ವಿದುಷಿ ಶಾಲಿನಿ ಆತ್ಮಭೂಷಣ್ ಪುತ್ತೂರು ಅವರಿಂದ ಪಡೆದಿದ್ದಾರೆ.

ಸೃಷ್ಟಿ ಅವರು ಬಂದಾರು ಗ್ರಾಮದ ಪೆರ್ಲ–ಬೈಪಾಡಿಯ ದುರ್ಗಾನುಗ್ರಹ ನಿಲಯದ ನಿವಾಸಿ, ದೇವಸ್ಥಾನದ ಅರ್ಚಕ ಪ್ರಶಾಂತ್ ಹೊಳ್ಳ ಹಾಗೂ ಮೇಘನಾ ಪ್ರಶಾಂತ್ ಹೊಳ್ಳ ದಂಪತಿಯ ಪುತ್ರಿ. ಪ್ರಸ್ತುತ ಉಜಿರೆಯ ಎಸ್.ಡಿ.ಎಂ. (ಸಿಬಿಎಸ್‌ಇ) ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *