ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ 2026-27ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಇದರ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಹಾಗೂ ಟ್ರಸ್ಟ್‌ನ ಸದಸ್ಯರನ್ನು ಶಾಸಕ ಹರೀಶ್ ಪೂಂಜ ಅವರು ಅಭಿನಂದಿಸಿದರು.

ಇದರೊಂದಿಗೆ ಉರಗ ಪ್ರೇಮಿ ಉಜಿರೆಯ ಸ್ನೇಕ್ ಜೋಯಿ, ಪತ್ರಕರ್ತ ಮನೋಹರ ಬಳಂಜ, ದೈವನರ್ತಕ ಬೇಬಿ ಪರವ ಹಾಗೂ ಯಕ್ಷಗಾನ ಕಲಾವಿದ ಸುಂದರ ಬಂಗಾಡಿ ಅವರನ್ನು ಶಾಸಕರು ತಮ್ಮ ಗೃಹ ಕಚೇರಿ ‘ಮಿಥಿಲಾ’ದಲ್ಲಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.

ಸಮಾಜಸೇವೆ, ಪರಿಸರ ಕಾಳಜಿ, ಪತ್ರಿಕೋದ್ಯಮ, ದೈವಾರಾಧನೆ ಹಾಗೂ ಯಕ್ಷಗಾನ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯವಾಗಿದೆ.









