ಬೆಳ್ತಂಗಡಿ: ಇತ್ತೀಚೆಗೆ ಕರ್ನಾಟಕ ಟಿವಿ ಚಾನೆಲ್ ವತಿಯಿಂದ ಉತ್ತಮ ಶಾಸಕ ಪ್ರಶಸ್ತಿಗೆ ಪುರಸ್ಕೃತರಾದ ಶಾಸಕ ಹರೀಶ್ ಪೂಂಜ ಅವರನ್ನು ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳ ವತಿಯಿಂದ ಗೌರವಿಸಲಾಯಿತು.

ಶಾಸಕರ ಮಿಥಿಲಾ ನಿವಾಸಕ್ಕೆ ಭೇಟಿ ನೀಡಿದ ಸಮಾಜದ ಪ್ರಮುಖರು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರ ನೇತೃತ್ವದಲ್ಲಿ ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಾ. ಪ್ರದೀಪ್ ನಾವೂರು, ಬಿ.ಕೆ. ಧನಂಜಯ ರಾವ್, ಗಿರೀಶ್ ಡೋಂಗ್ರೆ, ಕೇಶವ ಭಟ್ ಅತ್ತಾಜೆ, ಅನಂತ್ ಭಟ್ ಮಚ್ಚಿಮಲೆ, ಯೋಗೀಶ್ ಭಿಡೆ, ಅರುಣ್ ಕುಮಾರ್ ಸೇರಿದಂತೆ ಗಣ್ಯರು ಹಾಗೂ ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳು ಉಪಸ್ಥಿತರಿದ್ದರು.




