Breaking
21 Sep 2026, Mon

ಕವಿತೆಗಳು ಕವಿಯ ಅನುಭವದ ಒಂದು ಭಾಗದೊಂದಿಗೆ ಶೃಂಗಾರಗೊಂಡು ಹೊಮ್ಮುತ್ತವೆ: ರೇಮಂಡ್ ಡಿಕೂನಾ ತಾಕೊಡೆ

ಮಂಗಳೂರು: ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತದ ಆಯ್ದ ಹಿರಿಯ ಕವಿಗಳ ಕವಿಗೋಷ್ಟಿಯು ನಡೆಯಿತು.

ಈ ಕವಿಗೋಷ್ಠಿಯನ್ನು ಅರ್ಚಕರಾದ ಶ್ರೀಶ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರೇಮಂಡ್ ಡಿಕೂನಾ ತಾಕೊಡೆ ಅವರು ಜಾನಪದದ ಜೋಗುಳ, ಸ್ವಾತಂತ್ರ್ಯ ಹೋರಾಟದ ಪ್ರೇರಣೆ, ಹಾಗೂ ಇನ್ನಿತರ ಸಾಮಾಜಿಕ ಭದ್ದತೆಯ ವಿವಿಧ ವಿಷಯಗಳ ಜೊತೆಗಿನ ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ ಎಂದು ಹೇಳಿದರು.

ಕವಿಗೋಷ್ಟಿಯ ಚಾಲನಾ ಕವಿತೆ ಗಝಲ್ ಓದಿ ಡಾ ಸುರೇಶ್ ನೆಗಳಗುಳಿ ಮಾಡಿದರು. ಕವಿಗಳಾದ ವಿಜಯಲಕ್ಷ್ಮಿ ಕಟೀಲ್, ಅನಾರ್ಕಲಿ ಸಲಿಂ, ಸುಮಂಗಲ ದಿನೇಶ್, ಗಣೇಶ್ ಪ್ರಸಾದ್ ಜಿ, ಹರಿ ಪ್ರಸಾದ್ ಶೆಟ್ಟಿಗಾರ್, ವೆಂಕಟೇಶ ಗಟ್ಟಿ, ರಶ್ಮಿ ಸನಿಲ್, ರೇಮಂಡ್ ಡಿಕೂನಾ ತಾಕೊಡೆ ಕವಿಗಳು ಸಾಧರ ಪಡಿಸಿದರು.

ವೇದಿಕೆಯಲ್ಲಿ ಸೋಮೇಶ್ವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಅವರು, ನಾಯ್ಕರು ಸಮಾಜದ ಮುಖಂಡರಾದ ಹರಿಶ್ಚಂದ್ರ ಗಟ್ಟಿ ಉಪಸ್ಥಿತರಿದ್ದರು.

ಸಂಯೋಜಕ ಎಂಎಸ್ ವೆಂಕಟೇಶ ಗಟ್ಟಿ ಸ್ವಾಗತಿಸಿದರು, ರಶ್ಮಿ ಸನಿಲ್ ನಿರೂಪಿಸಿ ವಂದಿಸಿದರು. ಮಹಾ ಶಿವರಾತ್ರಿ ಪ್ರಯುಕ್ತ ದೇವಳಕ್ಕೆ ನೂರಾರು ಭಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಈ ಕವಿಗೋಷ್ಠಿ ನಡೆಯಿತು.

Leave a Reply

Your email address will not be published. Required fields are marked *