Breaking
21 Sep 2026, Mon

ಶಬರಿಮಲೆ ಯಾತ್ರೆ ವೇಳೆ ಹೃದಯಾಘಾತ: ಯುವಕ ಸಾವು

ಬೆಳ್ತಂಗಡಿ : ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ತೆಕ್ಕಾರಿನ ಸುಧೀರ್ ತೆಕ್ಕಾರು (28) ಎಂದು ಗುರುತಿಸಲಾಗಿದೆ.

ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಉಪ್ಪಿನಂಗಡಿ ಪ್ರಖಂಡದ ಸುರಕ್ಷಾ ಪ್ರಮುಖ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು. ತೆಕ್ಕಾರು ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ಸಮಾಜಸೇವೆ ಮಾಡುತ್ತಾ ಜನಮನ್ನಣೆ ಪಡೆದಿದ್ದರು.

Leave a Reply

Your email address will not be published. Required fields are marked *