ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಬಂಟ್ವಾಳ ವಲಯದ 27ನೇ ವಾರ್ಷಿಕ ಸಭೆಯು ಬಿ.ಸಿ.ರೋಡ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ವಲಯಾಧ್ಯಕ್ಷ ರಾಜೇಂದ್ರ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ಕೆಪಿಎ ಜಿಲ್ಲಾ ಅಧ್ಯಕ್ಷ ನವೀನ್ ರೈ ಪಂಜಳ ಉದ್ಘಾಟಿಸಿ, ವಲಯದ ಚಟುವಟಿಕೆಗಳನ್ನು ಶ್ಲಾಘಿಸಿದರು. ಇದೇ ವೇಳೆ ಜಿಲ್ಲೆಯ ಸಾಂತ್ವನ ವಿಮೆ ಯೋಜನೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ರಾದ ಆನಂದ್ ಏನ್. ಜಿಲ್ಲಾ ಉಪಾಧ್ಯಕ್ಷರಾದ ದೇವರಾಜ್ ಶೆಟ್ಟಿ, ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಎಸ್ ಕೆ ಪಿ ವಿವಿದೊದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಟಿ ಹರೀಶ್ ರಾವ್, ಗೌರವಾಧ್ಯಕ್ಷರಾದ ಕಿಶೋರ್ ಕುಮಾರ್, ವಲಯದ ಪ್ರದಾನ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್, ಉಪಾಧ್ಯಕ್ಷರುಗಳಾದ ಹರೀಶ್ ನಾಟಿ ಹಾಗೂ ರೋಷನ್ ಕಲ್ಲಡ್ಕ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರವಿ ಕಲ್ಪನೆ 2025–26ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಹಾಗೂ ಕೃಷ್ಣ ರಾಜ್ ರಾವ್ ಅವರು ಜಮಾ-ಖರ್ಚು ಲೆಕ್ಕ ಮಂಡಿಸಿದರು. ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಲಯದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ನೀಡಿ ಗೌರವಿಸಲಾಯಿತು.

ಗೌರವಾಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿದರು. ರೋಷನ್ ಕಲ್ಲಡ್ಕ ಧನ್ಯವಾದ ಸಲ್ಲಿಸಿದ್ದು, ದಯಾನಂದ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.


