Breaking
21 Sep 2026, Mon

ಮೊಗ್ರು: ಶ್ರೀ ರಾಮ ಶಿಶುಮಂದಿರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ; ನೂತನ ಕಟ್ಟಡ ಹಾಗೂ ಅನ್ನಯಜ್ಞದ ಕೊಠಡಿ ವೀಕ್ಷಣೆ

ಮೊಗ್ರು: ಜೈ ಶ್ರೀ ರಾಮ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ, ಮುಗೇರಡ್ಕ–ಮೊಗ್ರು ಗ್ರಾಮದ ಶ್ರೀ ರಾಮ ಶಿಶುಮಂದಿರದ ನೂತನ ಕಟ್ಟಡದ ಮಹಾಪೋಷಕರಾದ ಶಾಸಕ ಹರೀಶ್ ಪೂಂಜ ಶಿಶುಮಂದಿರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳ ಕುಶಲೋಪರಿ ವಿಚಾರಿಸಿದ ಶಾಸಕರು, ಮಕ್ಕಳ ಧಾರ್ಮಿಕ ಶಿಕ್ಷಣಕ್ಕೆ ಪೂರಕವಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡ ಹಾಗೂ ಅನ್ನಯಜ್ಞದ ಕೊಠಡಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರನ್ನು ಪುಟಾಣಿಗಳು ಹೂ ನೀಡಿ ಸ್ವಾಗತಿಸಿದರು. ಶಿಶುಮಂದಿರದ ಸಂಚಾಲಕ ಪ್ರವೀಣ್ ಮತ್ತಿಲಾರು ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಮೇಶ್ ನೆಕ್ಕರಾಜೆ, ಬಂದಾರು ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮಾಜಿ ಸದಸ್ಯ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ವಿನಯ ಬರುಂಗುಡೇಲು ಹಾಗೂ ಶಿಶುಮಂದಿರದ ಮಾತಾಜಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *