Breaking
21 Sep 2026, Mon

ಎಂ.ಸಿ.ಸಿ. ಬ್ಯಾಂಕ್ ನ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

ಮಂಗಳೂರು: ಎಂ.ಸಿ.ಸಿ. ಬ್ಯಾಂಕ್ ಲಿ. 2025–26ನೇ ಸಾಲಿನಲ್ಲಿ ರೂ. 10.07 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು.

ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 20 ಭಾನುವಾರದಂದು ಬೆಳಿಗ್ಗೆ 11.00 ಗಂಟೆಗೆ ಲೊಯೊಲಾ ಆಡಿಟೋರಿಯಂ, ಸಂತ ಅಲೋಶಿಯಸ್ ಪಿ.ಯು. ಕಾಲೇಜು, ಕೊಡಿಯಾಲಬೈಲ್, ಮಂಗಳೂರು ಇಲ್ಲಿ ನಡೆಯಿತು.

ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಆರಂಭದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರೊಂದಿಗೆ ವಿಶೇಷ ಆಹ್ವಾನಿತರು ಹಾಗೂ ಗಣ್ಯರು ನೆರವೇರಿಸಿದರು.

ಶ್ರೀ ಎಂ.ಪಿ. ನೊರೊನ್ಹ, ಎಂ.ಸಿ.ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವಕೀಲರು, ಶ್ರೀ ರೋಹನ್ ಮೊಂತೆರೋ, ವ್ಯವಸ್ಥಾಪಕ ನಿರ್ದೇಶಕರು, ರೋಹನ್ ಕಾರ್ಪೊರೇಶನ್, ಶ್ರೀ ಸಂತೋಷ್ ಡಿಸೋಜ, ಅಧ್ಯಕ್ಷರು, ಕಥೋಲಿಕ್ ಸಭಾ ಮಂಗಳೂರು, ಶ್ರೀ ಆಲ್ವಿನ್ ಕ್ವಾಡ್ರಸ್, ಅಧ್ಯಕ್ಷರು, ಆಲ್ ಇಂಡಿಯಾ ಕ್ಯಾಥೋಲಿಕ್ ಯುನಿಯನ್, ಕರ್ನಾಟಕ ರಾಜ್ಯ ಹಾಗೂ ಶ್ರೀ ರೋನಾಲ್ಡ್ ಗೋಮ್ಸ್, ಅಧ್ಯಕ್ಷರು, ಕ್ಯಾಥೋಲಿಕ್ ಅಸೋಸಿಯಶನ್ ಅಫ್ ಸೌತ್ ಕೆನರಾ ಉಪಸ್ಥಿತರಿದ್ದರು.

ಬ್ಯಾಂಕಿನ ಸ್ಥಾಪಕರಾದ ಶ್ರೀ ಪಿ.ಎಫ್. ಎಕ್ಸ್ ಸಲ್ಡಾನ್ಹಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಬ್ಯಾಂಕಿನ ಸದೃಢ ಹಣಕಾಸು ಪ್ರಗತಿಯನ್ನು ವಿವರಿಸಿದರು.

2025–26ನೇ ಸಾಲಿನಲ್ಲಿ ಬ್ಯಾಂಕ್ ರೂ. 10.07 ಕೋಟಿ ನಿವ್ವಳ ಲಾಭ ಗಳಿಸಿದ್ದು, ಠೇವಣಿಗಳು ರೂ. 872.88 ಕೋಟಿ, ಸುಮಾರು 24% ಬೆಳವಣಿಗೆಯೊಂದಿಗೆ; ಮುಂಗಡಗಳು ರೂ. 652.06 ಕೋಟಿ, ಸುಮಾರು 22% ಬೆಳವಣಿಗೆಯೊಂದಿಗೆ; ಹಾಗೂ ಕಾರ್ಯನಿರತ ಬಂಡವಾಳ ರೂ. 1,008 ಕೋಟಿ, ಸುಮಾರು 22% ಬೆಳವಣಿಗೆಯೊಂದಿಗೆ ತಲುಪಿದೆ ಎಂದು ತಿಳಿಸಿದರು.

ಬ್ಯಾಂಕಿನ ಷೇರು ಬಂಡವಾಳ ರೂ. 34.08 ಕೋಟಿ ಇದ್ದು, ನಿವ್ವಳ NPA 1.26%, Provision Coverage Ratio 68.34%, Return on Assets (ROA) 1.00% ಹಾಗೂ 31 ಮಾರ್ಚ್ 2026ರಂತೆ CRAR 16.53% ರಷ್ಟಿದೆ ಎಂದು ಅವರು ತಿಳಿಸಿದರು. ಬ್ಯಾಂಕಿನ ಒಟ್ಟು ವ್ಯವಹಾರವು ರೂ. 1525 ಕೋಟಿಯನ್ನು ಮೀರಿದೆ ಎಂದರು.

ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್ ಘೋಷಿಸಲಾಯಿತು. ಲಾಭ ವಿಂಗಡನೆಯನ್ನು ಮಾಡಿ ಸಹಕಾರ ಶಿಕ್ಷಣ ನಿಧಿಗೆ ರೂ. 22,66 ಲಕ್ಷವನ್ನು ಕಾದಿರಿಸಲಾಯಿತು.

2018ನೇ ಸಾಲಿನ ನಿರ್ದೇಶಕರ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಸ್ಮರಿಸಿದ ಅಧ್ಯಕ್ಷರು, ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದ್ದು, ಕಳೆದ 8 ವರ್ಷಗಳಲ್ಲಿ ಬ್ಯಾಂಕ್ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. ಬ್ಯಾಂಕಿನ ಪುನರುಜ್ಜೀವನಕ್ಕಾಗಿ ಆಡಳಿತ ಮಂಡಳಿಯ ಅಚಲ ಸಂಕಲ್ಪ ಮತ್ತು ಸತತ ಪರಿಶ್ರಮ, ಸದಸ್ಯರು ಹಾಗೂ ಸಿಬ್ಬಂದಿಯ ನಿರಂತರ ಬೆಂಬಲವೇ ಪ್ರಮುಖ ಕಾರಣವೆಂದು ಅವರು ಹೇಳಿದರು.

ಬ್ಯಾಂಕ್ “Double-Engine” ಆಡಳಿತ ವ್ಯವಸ್ಥೆಯಡಿ, Reserve Bank of India ಮತ್ತು State Co-operative Departmentಗಳ ನಿಯಂತ್ರಣ ಹಾಗೂ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ಕಾರ್ಯನಿರ್ವಹಣೆಯಲ್ಲಿ ವಿವಿಧ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಬ್ಯಾಂಕಿನ ಸ್ಥಾಪಕ ನಾಯಕರ ದೂರದೃಷ್ಟಿ ಮತ್ತು ಸೇವೆಯನ್ನು ಸ್ಮರಿಸಿದ ಅವರು, ಅವರ ಪರಂಪರೆಯನ್ನು ಮುಂದುವರಿಸಿ ಬ್ಯಾಂಕನ್ನು ಆರ್ಥಿಕವಾಗಿ ಸದೃಢ ಹಾಗೂ ಸುಸ್ಥಿರ ಸಹಕಾರಿ ಬ್ಯಾಂಕ್ ಆಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸದಸ್ಯರು ಬ್ಯಾಂಕಿನೊಂದಿಗೆ ನಿಷ್ಠೆಯಿಂದ ಮುಂದುವರಿಯುವಂತೆ ಹಾಗೂ ಪರಿಶೀಲಿಸದ ಮಾಹಿತಿ ಅಥವಾ ವದಂತಿಗಳನ್ನು ನಂಬದೆ, ರಚನಾತ್ಮಕ ಸಲಹೆಗಳನ್ನು ನೇರವಾಗಿ ಬ್ಯಾಂಕಿಗೆ ನೀಡುವಂತೆ ಅಧ್ಯಕ್ಷರು ಮನವಿ ಮಾಡಿದರು.

ವಿಸ್ತರಣಾ ಯೋಜನೆಯಡಿ ಮುಂದಿನ ವಾರ್ಷಿಕ ಮಹಾಸಭೆಯೊಳಗೆ 25 ಶಾಖೆಗಳು ಮತ್ತು 20 ATMs ಹೊಂದುವ ಗುರಿಯನ್ನು ತಿಳಿಸಿದ ಅವರು, 24ನೇ ಶಾಖೆಯನ್ನು ಪಡೀಲ್‌ನಲ್ಲಿ ಹಾಗೂ 25ನೇ ಶಾಖೆಯನ್ನು ಕದ್ರಿ ಅಥವಾ ಬಿಜೈನಲ್ಲಿ 2026–27ನೇ ಹಣಕಾಸು ವರ್ಷದ ಅಂತ್ಯದೊಳಗೆ ಸ್ಥಾಪಿಸಲಾಗುವುದು ಎಂದರು.

MCC Bank ಒಂದು ಕುಟುಂಬವಾಗಿದ್ದು, ಆಡಳಿತ ಮಂಡಳಿ, ಸದಸ್ಯರು ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ಬ್ಯಾಂಕನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಸದಸ್ಯರು ಬ್ಯಾಂಕಿನ ಸೇವೆಗಳನ್ನು ಬಳಸಿಕೊಂಡು Brand Ambassadors ಆಗಬೇಕೆಂದು ಹಾಗೂ Current Accounts ಸೇರಿದಂತೆ ಇತರ ಬ್ಯಾಂಕಿಂಗ್ ಖಾತೆಗಳನ್ನು ತೆರೆಯುವ ಮೂಲಕ ಬ್ಯಾಂಕಿನ ಬೆಳವಣಿಗೆಗೆ ಸಹಕರಿಸುವಂತೆ ಕರೆ ನೀಡಿದರು.

ಬ್ಯಾಂಕಿನ Brand Image ಬಲಪಡಿಸುವ ಉದ್ದೇಶದಿಂದ January 2027ರಲ್ಲಿ ಹೊಸ Logo ಪರಿಚಯಿಸಲಾಗುವುದು ಹಾಗೂ ಹೊಸ Website ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ATMs, Cash Deposit Machines ಮತ್ತು UPI ಜಾರಿಗೆ ತರುವ ಕಾರ್ಯ ಅಂತಿಮ ಹಂತದಲ್ಲಿದ್ದು, ಬಳಿಕ ಎಲ್ಲಾ ಶಾಖೆಗಳಲ್ಲಿ Customer Meets ಆಯೋಜಿಸಿ ಗ್ರಾಹಕರ ಸಲಹೆಗಳನ್ನು ಪಡೆದು ಸೇವೆಗಳನ್ನು ಮತ್ತಷ್ಟು ಸುಧಾರಿಸಲಾಗುವುದು ಎಂದರು.

ಕೊನೆಯಲ್ಲಿ, ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಬ್ಯಾಂಕಿಗೆ ನಿರಂತರ ಬೆಂಬಲ ನೀಡುತ್ತಿರುವ ಎಲ್ಲಾ ಸದಸ್ಯರಿಗೆ ಅಧ್ಯಕ್ಷರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

2025–26ನೇ ಸಾಲಿನ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳು, ಲೆಕ್ಕಪರಿಶೋಧನಾ ವರದಿ ಮತ್ತು ಅನುಸರಣೆ ವರದಿ, 2026–27ನೇ ಸಾಲಿನ ಕಾರ್ಯಕ್ರಮಗಳ ರೂಪುರೇಷೆ ಮತ್ತು ಬಜೆಟ್, ಹಾಗೂ ಬೈಲಾ ತಿದ್ದುಪಡಿಗಳ ಪ್ರಸ್ತಾವನೆಗಳನ್ನು ವಾರ್ಷಿಕ ಮಹಾಸಭೆಯ ಮುಂದೆ ಮಂಡಿಸಿ ಸದಸ್ಯರ ಅನುಮೋದನೆ ಪಡೆಯಲಾಯಿತು.

ಸದಸ್ಯರು ಮುಂಚಿತವಾಗಿ ಲಿಖಿತವಾಗಿ ಕೇಳಿದ ಪ್ರಶ್ನೆಗಳಿಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುನಿಲ್ ಮಿನೇಜಸ್ ಅವರು ಉತ್ತರಿಸಿದರು. ಡಾ. ಜೆರಾಲ್ಡ್ ಪಿಂಟೊ ಅವರನ್ನು Raknno Konkani Weekly ವತಿಯಿಂದ “Best Author of the Year” ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ, ಬ್ಯಾಂಕಿನ ಅಧ್ಯಕ್ಷರು ಹೂಗುಚ್ಛ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.

ಪ್ರಸಿದ್ಧ ನೃತ್ಯ ಕಲಾವಿದೆಯಾದ ಹಾಗೂ Golden Book of World Records ವತಿಯಿಂದ ಮಾನ್ಯತೆ ಪಡೆದಿರುವ Ms. Remona Pereira ಅವರು ತಮ್ಮ ಮನಮೋಹಕ ನೃತ್ಯ ಪ್ರದರ್ಶನದ ಮೂಲಕ ಸಭಿಕರನ್ನು ರಂಜಿಸಿದರು.

ಸಭೆಯ ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಹಾಗೂ ನಿರ್ದೇಶಕರಾದ ಶ್ರೀ ಆಂಡ್ರ್ಯೂ ಡಿಸೋಜ, ಶ್ರೀ ಜೋಸೆಫ್ ಎಂ. ಅನಿಲ್ ಪತ್ರಾವೊ, ಡಾ. ಜೆರಾಲ್ಡ್ ಪಿಂಟೊ, ಶ್ರೀ ಡೇವಿಡ್ ಡಿಸೋಜ, ಶ್ರೀ ಎಲ್ರಾಯ್ ಕಿರಣ್ ಕ್ರಾಸ್ಟೊ, ಶ್ರೀ ರೋಶನ್ ಡಿಸೋಜ, ಶ್ರೀ ಹೆರಾಲ್ಡ್ ಮೊಂತೆರೊ, ಶ್ರೀ ಜೆ.ಪಿ. ರೊಡ್ರಿಗಸ್, ಶ್ರೀ ವಿನ್ಸೆಂಟ್ ಲಸ್ರಾದೊ, ಶ್ರೀ ಮೆಲ್ವಿನ್ ವಾಸ್, ಶ್ರೀಮತಿ ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಶ್ರೀ ಸಿ.ಜಿ. ಪಿಂಟೊ ಹಾಗೂ ಶ್ರೀ ಸುಶಾಂತ್ ಸಲ್ಡಾನ್ಹಾ ಮತ್ತು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುನಿಲ್ ಮಿನೇಜಸ್ ಅವರು ಸದಸ್ಯರನ್ನು ಸ್ವಾಗತಿಸಿದರು. ಶ್ರೀ ಡೆರಿಲ್ ಲಸ್ರಾದೊ, ಮುಖ್ಯ ವ್ಯವಸ್ಥಾಪಕರು, ಮೋರ್ಗನ್ಸ್ ಗೇಟ್ ಕಾರ್ಯಕ್ರಮವನ್ನು ನಿರೂಪಿಸಿದರು.

ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಕ್ರಿಯವಾಗಿ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *