ಬೆಳ್ತಂಗಡಿ: ಇತ್ತೀಚೆಗೆ ಕರ್ನಾಟಕ ಟಿವಿ ಚಾನೆಲ್ ವತಿಯಿಂದ ಉತ್ತಮ ಶಾಸಕ ಪ್ರಶಸ್ತಿಗೆ ಪುರಸ್ಕೃತರಾದ ಶಾಸಕ ಹರೀಶ್ ಪೂಂಜ ಅವರನ್ನು ಕುತ್ಲೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಗೌರವಿಸಲಾಯಿತು.

ಶಾಸಕರ ಮಿಥಿಲಾ ನಿವಾಸಕ್ಕೆ ಭೇಟಿ ನೀಡಿದ ಗಣೇಶೋತ್ಸವ ಸಮಿತಿ ಹಾಗೂ ಗ್ರಾಮಸ್ಥರು ಗೌರವ ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಣ್ಣ ಶೆಟ್ಟಿ, ಕಾರ್ಯದರ್ಶಿ ಆನಂದ ಸಾಲಿಯಾನ್, ಸದಸ್ಯರಾದ ರವೀಶ್, ಅಜಿತ್ ಕುತ್ಲೂರು, ಪ್ರಭಾಕರ, ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




