Breaking
21 Sep 2026, Mon

ಮಹಿಳಾ ಶಕ್ತಿಯಿಂದ ಹಿಂದೂ ಸಂಸ್ಕೃತಿ ಮತ್ತು ರಾಷ್ಟ್ರಿಯತೆ ಉಳಿಯಲು ಸಾಧ್ಯ : ರಮಿತ ಸೂರ್ಯವಂಶಿ

ಬಂಟ್ವಾಳ: ಹಿಂದೂ ಸಮಾಜದಲ್ಲಿ ಇರುವಂತಹ ಸಂಸ್ಕೃತಿ, ಆಚಾರ, ವಿಚಾರಗಳು ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಟ್ಟುಪಾಡುಗಳನ್ನು ಮತ್ತು ರಾಷ್ಟ್ರಿಯತೆಯನ್ನು ಉಳಿಸಿ ಬೆಳೆಸಿಕೊಳ್ಳುವಲ್ಲಿ ಮಹಿಳೆಯರ ಪಾತ್ರ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮಾಜದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ನಾರಿಶಕ್ತಿ ಭಾರತಕ್ಕೆ ಏನೆಲ್ಲಾ ಸಾಧನೆ ಮಾಡಿದೆ ಎಂದೂ ಈ ಹಿಂದೆಯೇ ಮಹಿಳೆಯರು ಭಾರತದಲ್ಲಿ ತೋರಿಸಿಕೊಟ್ಟಿದ್ದಾರೆ.

ಈಗಿನ ಕಾಲದಲ್ಲಿ ಮತ್ತು ಪುರಾಣಗಳಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಸಬಲರಾಗಿದ್ದರು ಎಂದೂ ತಿಳಿದುಕೊಳ್ಳಬಹುದು. ಆದರೆ ಇತ್ತೀಚಿನ ಆಧುನಿಕತೆಯ ಆಡಂಬರದಿಂದಾಗಿ ಮಹಿಳೆಯರು ತನ್ನ ತನವನ್ನು ಕಳೆದು ಕೊಳ್ಳುತ್ತಿದ್ದಾರೆ ಎಂದೂ ಸಾಮಾಜಿಕ ಚಿಂತಕಿ ಹಾಗೂ ಗ್ರಾಮ ವಿಕಾಸ ಮಂಗಳೂರು ವಿಭಾಗ ಪರ್ಯವರಣ ಪ್ರಮುಖ್ ರಮಿತಾ ಸೂರ್ಯವಂಶಿ ಹೇಳಿದರು.

ಈ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರಿಯ ಚಿಂತನೆ, ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಅವರು ಇತ್ತೀಚಿಗೆ ಬಂಟ್ವಾಳ ತಾಲೂಕು ವಾಮದಪದವು ಸಾರ್ವಜನಿಕ ಗಣೇಶೋತ್ಸವದ ಮಹಿಳಾ ಧಾರ್ಮಿಕ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದರು.

ಮುಖ್ಯ ಅತಿಥಿಯಾಗಿ ಮೂಡಬಿದ್ರಿ ಜೈನ್ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಸಂಧ್ಯಾ ಅಳಕೆ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಪ್ರಮುಖರಾದ ಸುಲೋಚನಾ ಜಿ. ಕೆ. ಭಟ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *