Breaking
27 Jul 2026, Mon

ಪುತ್ತೂರಿನಿಂದ ನಾಪತ್ತೆಯಾಗಿದ್ದ ಮಹಿಳೆ ಶಂಭೂರು ಡ್ಯಾಮ್‌ನಲ್ಲಿ ಶವವಾಗಿ ಪತ್ತೆ

ಪುತ್ತೂರು: ಬಂಟ್ವಾಳ ತಾಲೂಕಿನ ಶಂಭೂರು ಎಎಂಆರ್ ಡ್ಯಾಮ್ ಬಳಿ ಜುಲೈ 24ರಂದು ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಗುರುತು ಇದೀಗ ಪತ್ತೆಯಾಗಿದೆ.

ಮೃತ ಮಹಿಳೆಯನ್ನು ಪುತ್ತೂರಿನ ಪಡ್ನೂರು ಗ್ರಾಮದ ಅಜಯನಗರ ನಿವಾಸಿ, 60 ವರ್ಷದ ವಿಜಯ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಜುಲೈ 23ರಂದು ಬೆಳಿಗ್ಗೆ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ವಿಜಯ ಅವರು ಹೊರಟಿದ್ದರು. ಆದರೆ, ರಾತ್ರಿ ತನಕ ಮನೆಗೆ ಮರಳದ ಹಿನ್ನೆಲೆಯಲ್ಲಿ ಅವರ ಪತಿ ರಾಮ ಭಟ್ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ನಾಪತ್ತೆಯಾಗಿದ್ದ ವಿಜಯ ಅವರ ಮೃತದೇಹ ಜುಲೈ 24ರಂದು ಶಂಭೂರು ಎಎಂಆರ್ ಡ್ಯಾಮ್ ಬಳಿ ಪತ್ತೆಯಾಗಿದ್ದು, ಬಳಿಕ ನಡೆದ ತನಿಖೆಯಲ್ಲಿ ಮೃತದೇಹದ ಗುರುತು ದೃಢಪಟ್ಟಿದೆ.

ಮೃತರು ಪತಿ ಹಾಗೂ ಪುತ್ರನನ್ನು ಅಗಲಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *