Breaking
19 Sep 2026, Sat

ಹಲಸು ಮೇಳವು ಕೃಷಿ ಸಂಭ್ರಮದ ಜೊತೆಯಲ್ಲಿ ರೈತರ ಬೆಳೆಗಳ ಮೌಲ್ಯವರ್ಧನೆ ಮಾಡಲು ಹೆಚ್ಚು ನಡೆಯಬೇಕು: ರೇಮಂಡ್ ಡಿಕೂನಾ ತಾಕೊಡೆ ಆಶಯ

ಇತ್ತೀಚಿನ ದಿನಗಳಲ್ಲಿ ಹಲಸು ಮೇಳಗಳು ನಡೆಯುತ್ತವೆ. ಅಲ್ಲಿ ಖಾದಿ ವಸ್ತ್ರ ಮಾರಾಟ, ಬಾಣಂತಿಯ ಮದ್ದುಗಳು, ಸಾಂಪ್ರದಾಯಿಕ ಸಾಂತ್‌ಮಾರಿಗಳ ತಾಂಬ್ಡೆಗುಳೆ, ವಿವಿಧ ತಳಿಯ ಸಸ್ಯಗಳು ಹಲಸು ಜೊತೆಗೆ ಮಾರಾಟ ಆಗುವುದು ಒಳ್ಳೆಯ ಬೆಳವಣಿಗೆ.

ಈ ಉಪಕ್ರಮದ ಕಾರಣ ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಮಾರಾಟದ ಜಾಗಗಳು ಒದಗಿಸಲು ಅವಕಾಶ ಆಗುತ್ತದೆ ಎಂದು ಮೇಳದ ಉದ್ಘಾಟನೆ ಮಾಡಿದ ರೇಮಂಡ್ ಡಿಕೂನಾ ತಾಕೊಡೆ ಹೇಳಿದರು.

ಅವರು ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಸ್ಕೈಲೈನ್ ಸಂಸ್ಥೆಯ ಆಲನ್ ಮತ್ತು ಸ್ಟೇನಿ ಅವರು ಆಯೋಜಿಸಿದ ಪ್ರಥಮ ಹಲಸು ಮೇಳವನ್ನು ಹಲಸು ಕತ್ತರಿಸಿ ಅದರ ತೊಳೆಗಳನ್ನು ವೇದಿಕೆಯ ಗೌರವ ಅಥಿತಿಗಳಿಗೆ ತಿನ್ನಿಸಿ ಮಾತನಾಡಿದರು.

ಅಪರೂಪದ ವಸ್ತುಗಳನ್ನು ಈ ಮೇಳಗಳು ಆಕರ್ಷಿಸುವ ‌ಮೂಲಕ ಅವುಗಳ ರುಚಿ ಇಂದಿನ ಯುವಜನರು ಆಸ್ವಾದಿಸುವಂತೆ ಮಾಡುವುದು ಸಂತೋಷದ ವಿಷಯ ಎಂದು ಹರಸಿದರು.

ಮುಖ್ಯ ಅಥಿತಿ ನಿರೂಪಕ,ಚಲನಚಿತ್ರ ನಟ ವಿಜೆ ಡಿಕ್ಸನ್ ಮಾತನಾಡಿ ಯುವಕರು ಈ ತರಹ ಮೇಳಗಳ ಭಾಗವಾಗಿ ಇರಬೇಕು. ಸಾಧನೆ ಹುಡುಕಿಕೊಂಡು ಬರುವುದಿಲ್ಲ ನಾವು ಶ್ರಮವಹಿಸಿ ಸಾಧಿಸಬೇಕು ಎಂದರು.

ಈ ವೇಳೆ ರಂಗಭೂಮಿ ನಟರಿಗೆ,ದಾನಿಗಳಿಗೆ ಗೌರವ ಅರ್ಪಿಸಲಾಯಿತು. ಮೊದಲಿಗೆ ಏಲನ್ ಸ್ವಾಗತಿಸಿ ಸ್ಟೇನಿ ವಂದಿಸಿದರು. ಬಬಿತಾ ನಿರೂಪಿಸಿದರು.

Leave a Reply

Your email address will not be published. Required fields are marked *