ಸಿದ್ಧಕಟ್ಟೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಹಾಗೂ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಯೋಜನೆಗೆ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಿದ್ಧಕಟ್ಟೆಯ ಜನೌಷಧಿ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಶ್ರೀ ರತ್ನಕುಮಾರ್ ಚೌಟ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜನೌಷಧಿ ಕೇಂದ್ರಗಳ ಮಹತ್ವ ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳು ಲಭ್ಯವಾಗುವ ಉದ್ದೇಶದ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸುರೇಶ್ ಕುಲಾಲ್, ಉದಯ ಪೂಜಾರಿ, ದಿನೇಶ್ ದಂಬೆದಾರ್, ದೀಪಕ್ ಶೆಟ್ಟಿಗಾರ್, ಹರೀಶ್, ನಿತ್ಯಾನಂದ ಕುದ್ಕೋಳಿ, ತಿಮ್ಮಪ್ಪ ಸೇರಿದಂತೆ ಜನೌಷಧಿ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

ಜನೌಷಧಿ ಕೇಂದ್ರದ ಮಾಲೀಕ ಮನೋಜ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಉಪಸ್ಥಿತರಿದ್ದವರಿಗೆ ಸಿಹಿತಿಂಡಿ ವಿತರಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.







