ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ನಡೆದ ವಿಶ್ವಕರ್ಮ ಪೂಜೆ ಹಾಗೂ ವಿಶ್ವಕರ್ಮ ಯಜ್ಞ ಕಾರ್ಯಕ್ರಮಗಳಲ್ಲಿ ಶಾಸಕ ಹರೀಶ್ ಪೂಂಜ ಭಾಗವಹಿಸಿದರು.

ವಿಶ್ವಕರ್ಮಾಭ್ಯುದಯ ಸಭಾ, ಲಾಯಿಲ ಹಾಗೂ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ, ಮಡಂತ್ಯಾರು ಮತ್ತು ನಾರಾವಿ ಇವರ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಪೂಜೆ ಹಾಗೂ ವಿಶ್ವಕರ್ಮ ಯಜ್ಞ ಕಾರ್ಯಕ್ರಮಗಳಲ್ಲಿ ಶಾಸಕರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಗಣ್ಯರು, ಸಮುದಾಯದ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.




