ಬಂಟ್ವಾಳ: ಅಸಮಾನತೆ, ಅಜ್ಞಾನ, ಮೂಢನಂಬಿಕೆ ಹಾಗೂ ಸಾಮಾಜಿಕ ಅನ್ಯಾಯಗಳಿಂದ ಮನುಷ್ಯನಿಗೆ ಮುಕ್ತಿ ದೊರೆಯುವುದೇ ನಿಜವಾದ ಸ್ವಾತಂತ್ರ್ಯ ಎಂಬ ವಿಶಾಲ ಚಿಂತನೆಗೆ ಶ್ರೀ ನಾರಾಯಣಗುರುಗಳು ತಮ್ಮ ಜೀವನದ ಮೂಲಕ ದಾರಿ ತೋರಿಸಿದರು ಎಂದು ಬರಹಗಾರ್ತಿ ಅರ್ಚನಾ ಎಂ. ಬಂಗೇರ ಹೇಳಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ, ಮನೋಜ್ ಕಟ್ಟೆಮಾರ್ ಅವರ ಆತಿಥ್ಯದಲ್ಲಿ ಸೆ. 18ರಂದು ನಡೆದ ‘ಗುರುತತ್ವವಾಹಿನಿ’ ಮಾಲಿಕೆ–78ರಲ್ಲಿ ಗುರುಸಂದೇಶ ನೀಡಿದ ಅವರು, ನಾರಾಯಣಗುರುಗಳ ಚಿಂತನೆಗಳು ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ ಎಂದರು.

ಶಿಕ್ಷಣದಿಂದ ಜ್ಞಾನ, ಸಂಘಟನೆಯಿಂದ ಶಕ್ತಿ ಹಾಗೂ ಆತ್ಮಗೌರವದಿಂದ ಸ್ವಾತಂತ್ರ್ಯ — ಈ ಮೂರು ಮಾರ್ಗಗಳ ಮೂಲಕ ಸಮಾಜವನ್ನು ಮುನ್ನಡೆಸುವ ನಾರಾಯಣಗುರುಗಳ ಸಂದೇಶವು ಇಂದಿನ ಯುವಜನತೆಗೆ ವಿಶೇಷವಾಗಿ ದಾರಿದೀಪವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಲ್ಲಡ್ಕ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಕೋಶಾಧಿಕಾರಿ ಕಿಶೋರ್ ಕಟ್ಟೆಮಾರ್, ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ಕಾರ್ಯದರ್ಶಿ ಗೀತಾ ಜಗದೀಶ್, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ನವೀನ್ ಕಾರಜೆ, ನವೀನ್ ಕುಡ್ಮೆರ್, ಸುನೀತಾ ಮಾರ್ನಬೈಲ್, ಸದಸ್ಯರಾದ ಯತೀಶ್ ಬೊಳ್ಳಯಿ, ಜಗನಾಥ ಕಲ್ಲಡ್ಕ, ಯಶೋಧರ್ ಕಡಂಬಳಿಕೆ, ಮಧುಸೂದನ್ ಮದ್ವ, ಪ್ರಶಾಂತ್ ಕೊಟ್ಟಾರಿ ಪಾಲು, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ಪ್ರೇಮಾನಾಥ ಕರ್ಕೇರ, ಶಿವಾನಂದ ಎಂ., ಅರುಣ್ ಮಹಾಕಾಳಿಬೆಟ್ಟು ಹಾಗೂ ಹರೇಕೃಷ್ಣ ಭಕ್ತವೃಂದದ ಸದಸ್ಯರು ಉಪಸ್ಥಿತರಿದ್ದರು.

ಭಜನಾ ಸಂಕೀರ್ತನೆಯಲ್ಲಿ ಕಾರ್ತಿಕ್ ದೇರಾಜೆ ಹಾಗೂ ಸಾತ್ವಿಕ್ ದೇರಾಜೆ ಸಹಕರಿಸಿದರು. ಆತಿಥ್ಯ ವಹಿಸಿದ್ದ ಮನೋಜ್ ಕಟ್ಟೆಮಾರ್ ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಪೂಜಾರಿ ಬೊಳ್ಳಾಯಿ ಧನ್ಯವಾದ ಅರ್ಪಿಸಿದರು. ಘಟಕದ ಅಧ್ಯಕ್ಷ ಕಿರಣ್ ರಾಜ್ ಪೂಂಜರಕೊಡಿ ಕಾರ್ಯಕ್ರಮ ನಿರೂಪಿಸಿದರು.







