ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಭ ಹಾಲು ಉತ್ಪಾದಕರ ಸಹಕಾರ ಸಂಘದ 2025–26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.18ರಂದು ವೀರಕಂಭ ಶ್ರೀ ಶಾರದಾ ಭಜನಾ ಮಂದಿರದ ಸಭಾಭವನದಲ್ಲಿ ಸಂಘದ ಅಧ್ಯಕ್ಷೆ ತೇಜಾಕ್ಷಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು 2025–26ನೇ ಸಾಲಿನಲ್ಲಿ ₹3.89 ಕೋಟಿ ವ್ಯವಹಾರ ನಡೆಸಿ ₹5.10 ಲಕ್ಷ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ನೀಡುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.

ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಚಂದ್ರಶೇಖರ್ ಭಟ್ ಅವರು ದನಗಳ ಆರೋಗ್ಯ ಹಾಗೂ ರೈತರು ಸಂಘಕ್ಕೆ ಪೂರೈಸುವ ಹಾಲಿನ ಗುಣಮಟ್ಟದ ಕುರಿತು ಮಾಹಿತಿ ನೀಡಿದರು. ವಿಟ್ಲ ವಲಯ ವಿಸ್ತರಣಾಧಿಕಾರಿ ಜಗದೀಶ್ ಎ. ಅವರು ಲಾಭದಾಯಕ ಹೈನುಗಾರಿಕೆಯ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಜಗನ್ನಾಥ್ ಆಳ್ವ ಮೈರಾ ಹಾಗೂ ಸುಂದರಿ ರಾಮ ನಾಯ್ಕ್ ಕೆಮ್ಮಟ್ಟೆ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ನಿರಂತರವಾಗಿ ಹಾಲು ಪೂರೈಸುತ್ತಿರುವ ರೈತರಿಗೆ ಸಂಘದ ವತಿಯಿಂದ ಪ್ರೋತ್ಸಾಹಕ ಉಡುಗೊರೆ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಜನೀಶ್, ನಿರ್ದೇಶಕರಾದ ಶಕುಂತಲಾ, ಜನಾರ್ಧನ ಪೂಜಾರಿ, ಜಯಪ್ರಕಾಶ್ ತೆಕ್ಕಿಪಾಪು, ಉಮೇಶ್ ಎನ್., ವಾಸಪ್ಪ ಗೌಡ, ಕೇಶವ ನಾಯ್ಕ, ರಮಣಿ, ರೂಪಲತಾ ಹಾಗೂ ವಸಂತಿ ಉಪಸ್ಥಿತರಿದ್ದರು.
ಹಾಲು ಪರೀಕ್ಷಕಿ ವೀಣಾ ಆನಂದ್ ಪ್ರಾರ್ಥಿಸಿದರು. ನಿರ್ದೇಶಕ ಜಯಪ್ರಕಾಶ್ ತೆಕ್ಕಿಪಾಪು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಬಂಗೇರ ವರದಿ ವಾಚಿಸಿದರು.



