Breaking
26 Apr 2026, Sun

ಸಪ್ತಸ್ವರ ಸೀಸನ್ 2 ಗಾಯಕೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಮಂಗಳೂರು: ಕನಪುರ ರೋಟರಿ ಭವನದಲ್ಲಿ ಸರ್ವಕಲ ಸೇವಾ ಟ್ರಸ್ಟ್ ಇದರ ಉದ್ಘಾಟನಾ ಸಮಾರಂಭ ಹಾಗೂ ಸಪ್ತಸ್ವರ ಕರೋಕೆ ಗಾಯನ ಸೀಸನ್ 2 ಕಾರ್ಯಕ್ರಮ ಫೆ.15 ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ತಪಸ್ಸಿನಂತೆ ಪರಿಶ್ರಮ ಮುಖ್ಯ. ಇಂದು ಪ್ರತಿಭೆ ಪ್ರದರ್ಶನಕ್ಕೆ ವಿಫಲ ಅವಕಾಶಗಳಿದ್ದು. ಸದುಪಯೋಗ ಪಡಿಸಿಕೊಂಡು ಬೆಳೆಯಬೇಕು ಎಂದರು.

ಸಂಗೀತ ನಿರ್ದೇಶಕ ಲಯ ಕೋಕಿಲ ಮಾತನಾಡಿ ಸಂಗೀತ ದೈವದತ್ತ ಬರುವ ಕಲೆ, ಅದನ್ನು ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಸಂಗೀತಕ್ಕೆ ಮಹಾನ್ ಶಕ್ತಿ ಇದೆ ತಪಸ್ಸಿನಂತೆ ಸಾಧನೆ ಮಾಡಬೇಕು ಎಂದರು.

ಇದೇ ವೇಳೆ ಶಂಕರಪುರ ಚರ್ಚ್, ಧರ್ಮಗುರು ಪ್ರಕಾಶ್ ಅನಿಲ್ ಕ್ಯಾಸ್ತಲಿನೋ, ದೊಡ್ಡಣ್ಣಗುಡ್ಡೆ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿಗಳಾದ ರಮಾನಂದ ಗುರೂಜಿ ಅವರು ಸರ್ಕಾರಿ ಗುಡ್ಡೆ ಜಾಮಿಯಾ ಮಸೀದಿ ಧರ್ಮ ಗುರುಗಳಾದ ಯೂಸಿಫ್ ವಿಟ್ಲ, ಚಿತ್ರದ ನಿರ್ಮಾಪಕ ಕೆ. ಸತ್ಯೇಂದ್ರ ಪೈ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಿದರು.

“ಜೂಲಿಯಾನ ದಾಂತಿ” ಉದ್ಯಾವರ ಅವರಿಗೆ “ಕೃಷಿ ರತ್ನ ಪ್ರಶಸ್ತಿ” “ಅಲಿಷ ಮಂಡೋನ” ಶಂಕರಪುರ ಇವರಿಗೆ “ಗಾನ ರತ್ನ ಪ್ರಶಸ್ತಿ” “ಬಿ ಮೋಹಿದ್ದಿನ್” ಉಡುಪಿ ಇವರಿಗೆ “ಸಮಾಜ ರತ್ನ” ಗ್ರಾಮ ಪಂಚಾಯಿತಿ ಅಧ್ಯಕ್ಷರಾದ “ಮಾಲಿನಿ ಶೆಟ್ಟಿ” ರವರಿಗೆ “ಸೇವ ರತ್ನ” ಪ್ರಶಸ್ತಿ ಮೈಸೂರಿನ ಹೆಸರುವಾಸಿಯಾಗಿರುವ “ರಕ್ತದಾನಿ ಮಂಜು” ರವರಿಗೆ “ಜೀವ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಸ್ಪರ್ಧೆಯಲ್ಲಿ 60 ಕ್ಕಿಂತ ಹೆಚ್ಚು ಗಾಯಕ ಗಾಯಕಿಯರು ಪಾಲ್ಗೊಂಡಿದ್ದರು. ಪ್ರೇಕ್ಷಕರ ವಿನಂತಿ ಮೇರೆಗೆ ಶಾಸಕ ಸುರೇಶ್ ಗೋರ್ಮೆ ಶೆಟ್ಟಿ ರವರು ಕರೋಕೆಯಲ್ಲಿ ಗಾಯಕ ಮುಕೇಶ್ ಹಾಡಿರುವ ಒಂದು ಸುಂದರವಾದ ಹಾಡು ಹಾಡಿ ಮನರಂಜಿಸಿದರು.

ಈ ಸಂದರ್ಭದಲ್ಲಿ “ಸರ್ವಕಲ ಸೇವಾ ಟ್ರಸ್ಟ್” ನ ಅಧ್ಯಕ್ಷೇ “ರಕ್ತದಾನಿ ನೀಮ ಲೋಬೊ” ರವರು ಗಣ್ಯರನ್ನು ಮತ್ತು ಸನ್ಮಾನಿತರನ್ನು ಹಾಗೂ ಎಲ್ಲಾ ಗಾಯಕ ಗಾಯಕಿಯರನ್ನು ಸ್ವಾಗತಿಸಿದರು. ಟ್ರಸ್ಟ್ ಖಜಂಚಿಯಾದ ಜನಿಸಾ ಲೋಬೊ ರವರು ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿಯಾದ ಡಾ. ಜೋಸೆಫ್ ಲೋಬೊ ಅವರು ನಿರೂಪಿಸಿದರು.

Leave a Reply

Your email address will not be published. Required fields are marked *