Breaking
21 Sep 2026, Mon

ಸಜೀಪ ಮುನ್ನೂರು ಮಹಾಕಾಳಿ ದೇವಸ್ಥಾನದಲ್ಲಿ ಫೆ. 23 ರಂದು ಪ್ರತಿಷ್ಠಾಪನಾ ವರ್ಧಂತ್ಯುತ್ಸವ

ಬಂಟ್ವಾಳ: ಸಜೀಪ ಮುನ್ನೂರಿನ ಮಹಾಕಾಳಿ ಪಡ್ಪು ಶ್ರೀ ಮಹಾಕಾಳಿ ದೇವಸ್ಥಾನದ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶದ ದಿನಾಚರಣೆಯ ಅಂಗವಾಗಿ ಫೆ. 23 ರಂದು ಪ್ರತಿಷ್ಠಾಪನಾ ವರ್ಧಂತ್ಯುತ್ಸವವು ಶ್ರದ್ಧಾ ಭಕ್ತಿಯಿಂದ  ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪುಣ್ಯಹ, ಪಂಚಗವ್ಯ, ದ್ವಾದಶ ನಾಳಿಕೇರ ಗಣಯಾಗ, ದುರ್ಗಾ ಹೋಮ, ಕಲ್ಪೋಕ್ತ ಪೂಜೆ , ಅನ್ನ ಸಂತರ್ಪಣೆ , ಲಲಿತಾ ಸಹಸ್ರನಾಮ ಅರ್ಚನೆ, ಸಪ್ತಶತಿ ಪಾರಾಯಣ, ರಂಗ ಪೂಜೆ, ಶ್ರೀ ಸಪ್ತಶತಿ ಪಾರಾಯಣ, ಪ್ರಸನ್ನ ಮಹಾ ಮಂಗಳಾರತಿ ಜರುಗಲಿದೆ.

ಮಧ್ಯಾಹ್ನ 2 ಗಂಟೆಯಿಂದ ವಿಶ್ವ ಭಾರತಿ ಯಕ್ಷ ಸಂಜೀವಿನಿ ಮುಡಿಪು ಇವರಿಂದ ಯಕ್ಷಗಾನ ತಾಳಮದ್ದಳೆ ಮಾಗದವದೆ ಕಾರ್ಯಕ್ರಮ ನಡೆಯಲಿದ್ದು ವಿವಿಧ ಬಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *