Breaking
21 Sep 2026, Mon

ಮಧ್ಯಪ್ರದೇಶದಲ್ಲಿ ಗೆಳತಿಯನ್ನು ಕೊಂದು ಆತ್ಮದ ವಶೀಕರಣಕ್ಕೆ ಯತ್ನಿಸಿದ ಭೂಪ

ಮಧ್ಯಪ್ರದೇಶ: ಗೆಳತಿಯನ್ನು ಕೊಂದು ಆತ್ಮದ ವಶೀಕರಣಕ್ಕೆ ಯತ್ನಿಸಿದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ನ ದ್ವಾರಕಪುರಿಯ ಅಪಾರ್ಟ್ಮೆಂಟ್ ವೊಂದರಲ್ಲಿ ನಡೆದಿದೆ.

ಪಿಯೂಷ್ ಧಮ್ನೋಡಿಯಾ ಹತ್ಯೆ ಮಾಡಿರುವ ಆರೋಪಿಯಾಗಿದ್ದು, ಈತ ತನ್ನೊಂದಿಗೆ ಸಂಬಂಧದಲ್ಲಿದ್ದ 24 ವರ್ಷದ ಗೆಳತಿಯನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿದ್ದಾನೆ.

ಇವರಿಬ್ಬರೂ ಎಂಬಿಎ ಓದುತ್ತಿದ್ದು ಮದುವೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಕುಟುಂಬಸ್ಥರ ಒಪ್ಪಿಗೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದ ಕಾರಣ ಮದುವೆಗೆಯಾಗುವುದಕ್ಕೆ ಯುವತಿ ನಿರಾಕರಿಸಿದ್ದಳು. ಈ ಬಗ್ಗೆ ಮಾತುಕತೆಗೆ ಬಂದಾಗ ಇಬ್ಬರ ನಡುವೆ ಏರ್ಪಟ್ಟಿದ್ದ ಗಲಾಟೆ ತಾರಕಕ್ಕೇರಿದ ಯುವಕ ಯುವತಿಯನ್ನು ಹತ್ಯೆ ಮಾಡಿದ್ದಾನೆ.

ಬಳಿಕ ಅಲ್ಲಿಂದ ಮಹಾರಾಷ್ಟ್ರದ ಪನ್ವೇಲ್ಗೆ ಆರೋಪಿ ಪ್ರಯಾಣಿಸಿದ್ದ ಪಿಯೂಷ್ ಧಮ್ನೋಡಿಯಾ ಖಾಸಗಿ ಹೋಟೆಲ್ ನಲ್ಲಿ ಯುವತಿ ಆತ್ಮದ ವಶೀಕರಣಕ್ಕೆ ಮಾಟಮಂತ್ರ ಮಾಡಿದ್ದ. ಆತ್ಮದ ಜೊತೆಗೆ ಮಾತುಕತೆ ನಡೆಸಲು ಆರೋಪಿ ಯತ್ನಿಸಿದ್ದ ಎನ್ನಲಾಗಿದೆ.

ಯುವತಿ ನಾಪತ್ತೆಯಾದ ಬಳಿಕ ಫೆ.11 ರಂದು ಯುವತಿ ತಂದೆಯಿಂದ ದೂರು ದಾಖಲಾಗಿತ್ತು. ಫೆ.13 ರಂದು ಮೃತದೇಹ ಪತ್ತೆಯಾಗಿದೆ. ಬಳಿಕ ಆರೋಪಿ ಪಿಯೂಷ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ವಿಚಾರ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *