Breaking
12 Sep 2026, Sat

PGRSS ಬೃಂದಾವನದ ತಾಯಂದಿರಿಗೆ ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೆಟ್‌ನಿಂದ ದಿನಬಳಕೆ ಸಾಮಗ್ರಿ ವಿತರಣೆ

ಮೈಸೂರು: PGRSS ನಿರಾಶ್ರಿತರು ಹಾಗೂ ವೃದ್ಧರ ಬೃಂದಾವನದ ತಾಯಂದಿರಿಗೆ ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೆಟ್ ವತಿಯಿಂದ ಆಹಾರ ಮತ್ತು ದಿನಬಳಕೆಯ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಸಂಸ್ಥೆಯ ಪದಾಧಿಕಾರಿ ಹೇಮಂತ್ ಕುಮಾರ್ ಹಾಗೂ ಅವರ ಪತ್ನಿಯವರು ಸುಮಾರು ₹5,000 ಮೌಲ್ಯದ ಒಂದು ತಿಂಗಳಿಗೆ ಅಗತ್ಯವಾಗುವ ಗೋಧಿ ಹಿಟ್ಟು, ಅಡುಗೆ ಎಣ್ಣೆ, ಮಸಾಲೆ ಪದಾರ್ಥಗಳು, ಸೋಪು, ಪೇಸ್ಟ್ ಸೇರಿದಂತೆ ವಿವಿಧ ದಿನಬಳಕೆಯ ಸಾಮಗ್ರಿಗಳನ್ನು ಸೆ. 11ರಂದು ವಿತರಿಸಿದರು.

ಈ ಸೇವಾ ಕಾರ್ಯಕ್ಕೆ ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೆಟ್‌ನ ಅಧ್ಯಕ್ಷ ಯಾದವ್ ಹರೀಶ್ ಹಾಗೂ ಸಹ ಕಾರ್ಯದರ್ಶಿ, ರಕ್ತದಾನಿ ಮಂಜು ಅವರು ಸಂಸ್ಥೆಯ ಹಾಗೂ ಬೃಂದಾವನದ ತಾಯಂದಿರ ಪರವಾಗಿ ಹೇಮಂತ್ ಕುಮಾರ್ ಹಾಗೂ ಅವರ ಪತ್ನಿಗೆ ಹೃತ್ಪೂರ್ವಕ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *