ಬಂಟ್ವಾಳ: ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಇದರ ಪ್ರಥಮ ವರ್ಷದ ಆಟಿದ ಕೂಟ ಕಾರ್ಯಕ್ರಮ ಅಗಸ್ಟ್ 2 ಭಾನುವಾರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕರೆಂಕಿ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಇದರ ಸಹಯೋಗದೊಂದಿಗೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕರೆಂಕಿಯ ಸಭಾಭವನದಲ್ಲಿ ನಡೆಯಿತು. ಆಟಿದ ಕೂಟ ಕಾರ್ಯಕ್ರಮವನ್ನು ಗುರುರಾಜ್ ಭಟ್ ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕರೆಂಕಿ ಇವರು ದೀಪ ಪ್ರಜಲನೆ ಹಾಗೂ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಆಟಿಯ ವಿಶೇಷತೆಯ ಬಗ್ಗೆ ತಿಳಿಸಲಾಯಿತು. ನಂತರ ವಿವಿಧ ತುಳುನಾಡಿನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಂತರ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿಯ ಸದಸ್ಯರು ತಯಾರಿಸಿ, ಸಹ ಭೋಜನದ ವ್ಯವಸ್ಥೆಯನ್ನು ಮಾಡಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಅಶ್ವಿನ್ ರಾವ್ ಅರ್ಚಕರು ಶ್ರೀ ಕ್ಷೇತ್ರ ಕರೆಂಕಿ, ಶ್ರೀ ರಾಮಚಂದ್ರ ಶೆಟ್ಟಿ ದಂಡೆ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಕರೆಂಕಿ, ನಾರಾಯಣ ಗೌಡ ಕರೆಂಕಿ ಪ್ರಗತಿಪರ ಕೃಷಿಕರು, ರಾಧಾಕೃಷ್ಣ ಹಿಂದೂ ಜನಜಾಗೃತಿ ಸಮಿತಿ, ಧರ್ಣಪ್ಪ ಪೂಜಾರಿ ರಾಮನಗರ ಉದ್ಯಮಿ, ಹರೀಶ್ ಕೋಟ್ಯಾನ್ ಮಡಿವಾಳಬೆಟ್ಟು ಉದ್ಯಮಿ, ಎಂ. ಭಾಸ್ಕರ ಕುಲಾಲ್ ಕರೆಂಕಿ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡನಡುಗೋಡು ಬಿ. ಒಕ್ಕೂಟ, ವಿಠಲ ಡಿ. ಅಧ್ಯಕ್ಷರು ಆಡಳಿತ ಮಂಡಳಿ ಶ್ರೀ ಕ್ಷೇತ್ರ ಕರೆಂಕಿ, ಗಂಗಾಧರ ನೆಕ್ಕರೆ ಅಧ್ಯಕ್ಷರು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ, ವಿಲಾಸಿನಿ ಶಾಂತವೀರ ಪೂಜಾರಿ ಫರ್ಲಾ ಗೌರವಾಧ್ಯಕ್ಷರು ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ, ಮೀನಾಕ್ಷಿ ಜಗನ್ನಿವಾಸ ಗೌಡ ಮಣಿ ಸದಸ್ಯರು ಪುರಸಭೆ ಬಂಟ್ವಾಳ, ಪ್ರಪುಲ್ಲಾ ಡಿ. ದಡ್ಡಲಕಾಡು ಸೇವಾ ಪ್ರತಿನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡನಡುಗೋಡು ಬಿ. ಒಕ್ಕೂಟ, ಲೀಲಾವತಿ ಕರೆಂಕಿ ಅಧ್ಯಕ್ಷರು ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ, ಶ್ವೇತಾ ಸಂತೋಷ್ ದಾಸರಕೋಡಿ ಕಾರ್ಯದರ್ಶಿ ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಉಪಸ್ಥಿತರಿದ್ದರು.

ಆಟಿ ತಿಂಗಳ ವಿಶೇಷತೆಯ ಬಗ್ಗೆ ಹರ್ಷಿತಾ ದಿನೇಶ್ ಕರೆಂಕಿ ತಿಳಿಸಿದರು. ದೇವಕಿ ರತ್ನಾಕರ ಕರೆಂಕಿ ಸ್ವಾಗತಿಸಿದರು. ಶ್ವೇತಾ ಸಂತೋಷ್ ದಾಸರಕೋಡಿ ವಂದಿಸಿದರು.

ವೇದಾವತಿ ಸತೀಶ್ ಕರೆಂಕಿ ಹಾಗೂ ಚೇತನಾ ರವಿ ಕರೆಂಕಿ ಕಾರ್ಯಕ್ರಮ ನಿರೂಪಿಸಿದರು.


