ಮೂಡುಬಿದಿರೆ: ತಾಲೂಕಿನ ಯುವಕನೋರ್ವ ಮುಂಬಯಿಯಲ್ಲಿ ರೈಲಿನಿಂದ ಎಸೆಯಲ್ಪಟ್ಟು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ದಿವಂಗತ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಶಶಿ ಕೋಟ್ಯಾನ್ (32) ಎಂದು ಗುರುತಿಸಲಾಗಿದೆ.
ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದ ಶಶಿ ಕೋಟ್ಯಾನ್ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಸಂಬಂಧಿಕರು ಮುಂಬಯಿಗೆ ತೆರಳಿದ್ದಾರೆ. ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.



