Breaking
16 Jul 2026, Thu

ಶೌರ್ಯ ಘಟಕ ಕಾಡಬೆಟ್ಟು ವಗ್ಗ ತಂಡಕ್ಕೆ ದೇವಸ್ಥಾನ ಒಳಾಂಗಣ ಸ್ವಚ್ಛತಾ ಮಷೀನ್ ಹಸ್ತಾಂತರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಘಟಕ ಕಾಡಬೆಟ್ಟು ವಗ್ಗ ತಂಡಕ್ಕೆ ಸುದೀಪ್ ರೈ ಕಾಡಬೆಟ್ಟು ರವರು ದೇವಸ್ಥಾನ ಒಳಾಂಗಣ ಸ್ವಚ್ಛತಾ ಮಷೀನ್ ಕೊಡುಗೆಯಾಗಿ ನೀಡಿದ್ದು ಶ್ರೀಯುತರ ಸಹೋದರ ಪ್ರಮೋದ್ ಕುಮಾರ್ ರೈ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಯೋಜನೆಯ ಕೃಷಿ ಮೇಲ್ವಿಚಾರಕ ಭಾಸ್ಕರ್, ವಗ್ಗ ವಲಯದ ಮೇಲ್ವಿಚಾರಕಿ ಸವಿತಾ, ವಲಯದ ಅಧ್ಯಕ್ಷರಾದ ಉಮೇಶ್, ಕಾಡಬೆಟ್ಟು ಒಕ್ಕೂಟದ ಪದಾಧಿಕಾರಿಗಳಾದ ಮೋಹಿನಿ, ವನಿತಾ, ಶೌರ್ಯ ತಂಡದ ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕೀ ರೇಖಾ.ಪಿ, ಸದಸ್ಯರಾದ ಸಂಪತ್ ಶೆಟ್ಟಿ ಮಹಾಬಲ ರೈ, ಅಶೋಕ್ ಬೊಲ್ಮಾರು , ಅಶೋಕ್ ಹಾರೊದ್ದು, ವಿನೋದ್, ನಾರಾಯಣಶೆಟ್ಟಿ ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *