ಮಂಗಳೂರು: ಕಣ್ಣೂರಿನಲ್ಲಿ ಭೂಕುಸಿತ – ನಾಲ್ಕು ಮನೆಗಳಿಗೆ ಹಾನಿ

ಮಂಗಳೂರು: ನಗರದ ಹೊರವಲಯದ ಕಣ್ಣೂರಿನ ಎಸ್‌.ಎಚ್‌. ನಗರದ ದಯಾಬು ಎಂಬಲ್ಲಿ ಜೂನ್ 16ರಂದು ಭೂಕುಸಿತ ಸಂಭವಿಸಿದ್ದು, ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಗುಡ್ಡ ಕುಸಿದ ಪರಿಣಾಮ 4 ಮನೆಗಳಿಗೆ ಹಾನಿಯಾಗಿದ್ದು, ಮೈಮೂನಾ ಎಂಬವರ ಮನೆ ಸಂಪುರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಮನೆವಾಸಿಗಳು ಮದುವೆ ಸಮಾರಂಭಕ್ಕೆ ತೆರಳಿದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ.

ಇನ್ನೂ ನಾಲ್ಕು ಮನೆಗಳು ಅಪಾಯದಲ್ಲಿದ್ದು, ಭಾರೀ ಮಳೆಯು ಮತ್ತೆ ಭೂಕುಸಿತ ಉಂಟುಮಾಡಬಹುದೆಂದು ಆತಂಕ ವ್ಯಕ್ತವಾಗಿದೆ.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಖಂಗೊಂಡಿರುವ ಹಾಗೂ ಅಪಾಯದಲ್ಲಿರುವ ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

Leave a Reply

Your email address will not be published. Required fields are marked *