ಅಜೆಕಾರು: 2024ರ ಅಕ್ಟೋಬರ್ 20ರಂದು ಅಜೆಕಾರಿನ ಮರ್ಣೆ ಗ್ರಾಮದ ದೆಪ್ಪುತ್ತೆಯಲ್ಲಿ ನಡೆದ ಉದ್ಯಮಿ ಬಾಲಕೃಷ್ಣ ಪೂಜಾರಿ (44) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತ್ನಿ ಪ್ರತಿಮಾ (36)ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರತಿಮಾ ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ತಮ್ಮ ಸಂಬಂಧಕ್ಕೆ ಬಾಲಕೃಷ್ಣ ಅಡ್ಡಿಯಾಗುತ್ತಿದ್ದಾರೆಂದು ಭಾವಿಸಿ ಕೊಲೆ ಮಾಡಿದ್ದಾರೆ.

ಆಹಾರದಲ್ಲಿ ವಿಷ ಹಾಕಿದರೂ ಬಾಲಕೃಷ್ಣ ಬದುಕುಳಿದ ಹಿನ್ನೆಲೆಯಲ್ಲಿ, ಪ್ರತಿಮಾ,ಪ್ರಿಯಕರ ದಿಲೀಪ್ ಹೆಗ್ಡೆ ಅವರನ್ನು ಮನೆಗೆ ಕರೆಸಿ ಪತಿಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ.
ಪ್ರತಿಮಾನ ಸೋದರನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ, ಅ.25ರಂದು ಇಬ್ಬರೂ ಬಂಧಿತರಾಗಿದ್ದರು. ವಿಚಾರಣೆಯಲ್ಲಿ ತಪ್ಪು ಒಪ್ಪಿಕೊಂಡಿದ್ದಾರೆ.



