ಮೂಡುಬಿದಿರೆ: ಒಮಾನ್ ನಲ್ಲಿ ಜುಲೈ 27ರಂದು ಸಂಭವಿಸಿದ ವಾಹನ ಅಪಘಾತದಲ್ಲಿ ಮೂಡುಬಿದಿರೆ ಸಮೀಪದ ಸಾಣೂರು ಮೂಲಗುತ್ತು ನಿವಾಸಿ ರಾಜವರ್ಮ ಜೈನ್ (33) ಮೃತಪಟ್ಟಿದ್ದಾರೆ.

ರಾಜವರ್ಮ ಜೈನ್ ಅವರು ಒಮಾನ್ ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕಂಪೆನಿಯ ಆವರಣದಲ್ಲಿ ಮತ್ತೋರ್ವ ಸಿಬ್ಬಂದಿ ವಾಹನವನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಅವರು ಆಕಸ್ಮಿಕವಾಗಿ ವಾಹನದಡಿಗೆ ಸಿಲುಕಿದ್ದು, ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


