Breaking
22 Sep 2026, Tue

ಅರುಣ್ ಪುತ್ತಿಲರಿಗೆ ಬಿಗ್ ರಿಲೀಫ್: ಗಡಿಪಾರು ವಿಚಾರಣೆ ಜೂ.27ಕ್ಕೆ ಮುಂದೂಡಿಕೆ

ಪುತ್ತೂರು: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ವಿಚಾರದಲ್ಲಿ ಇದೀಗ ಬಿಗ್ ರಿಲೀಫ್ ಸಿಕ್ಕಿದೆ.

ಈ ಸಂಬಂಧ ಅವರಿಗೆ ನೋಟಿಸ್ ಕೂಡಜಾರಿ ಮಾಡಲಾಗಿತ್ತು.

ಆದ್ರೆ ಇಂದು ಪುತ್ತೂರಿನ ಎಸಿ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಅರುಣ್ ಪುತ್ತಿಲ ಗಡಿಪಾರಿಗೆ ಪೊಲೀಸರು ಸೂಕ್ತ ಹಾಗೂ ಸಮರ್ಪಕ ದಾಖಲೆ ಸಲ್ಲಿಸದ ಕಾರಣ ಜೂ.27ಕ್ಕೆ ಮುಂದೂಡಿ ಸಮರ್ಪಕ ದಾಖಲೆ ಸಲ್ಲಿಸುವಂತೆ ಆದೇಶಿಸಲಾಯಿತು.

ಅರುಣ್ ಪುತ್ತಿಲ ಪರ ಪುತ್ತೂರಿನ ಹಿರಿಯ ವಕೀಲರಾದ ನರಸಿಂಹ ಪ್ರಸಾದ್ ಭಾಗಿಯಾಗಿ ವಾದಿಸಿದರು.

ಪುತ್ತಿಲ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲು ಸಿದ್ಧತೆ ನಡೆಸಲಾಗಿತ್ತು.

Leave a Reply

Your email address will not be published. Required fields are marked *