Breaking
22 Sep 2026, Tue

ಗಡಿಪಾರು ನೋಟಿಸ್ ಪಟ್ಟಿ ವಿಚಾರಣೆ ಜೂ. 21 ಕ್ಕೆ ಮುಂದೂಡಿಕೆ

ಪುತ್ತೂರು: ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ ಸಂಬಂಧಪಟ್ಟ ಗಡಿಪಾರು ನೋಟಿಸ್ ಪಟ್ಟಿಯ ವಿಚಾರಣೆ ಪುತ್ತೂರಿನ ಸಹಾಯಕ ಆಯುಕ್ತರ
ಕಚೇರಿಯಲ್ಲಿ ಜೂ.6 ರಂದು ನಡೆಯಿತು.

ಸುಮಾರು 36 ಮಂದಿ ಹಳೆ ಆರೋಪಿಗಳಿಗೆ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಅದರಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಕೀಂ ಕೂರ್ನಡ್ಕ, ಅಬ್ದುಲ್ ರಹಮಾನ್, ಅಝೀಜ್, ಮಹಮ್ಮದ್ ಶಕೀರ್, ಅಬ್ದುಲ್ ಅಝೀಜ್, ಅಶ್ರಫ್, ಮನೋಜ್ ಕುಮಾರ್ ಅವರು ತಮ್ಮ ವಕೀಲರ ಮೂಲಕ ಸಹಾಯಕ ಆಯುಕ್ತರ ಮುಂದೆ ವಿಚಾರಣೆಗೆ ಹಾಜರಾದರು.

ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಉಪ್ಪಿನಂಗಡಿ, ಬೆಳ್ತಂಗಡಿ, ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಗೆ ಸೇರಿದವರ ಗಡಿಪಾರು ಪಟ್ಟಿಯ ವಿಚಾರಣೆಯನ್ನು ನಡೆಸಲಾಗಿತ್ತು.

ಮುಂದಿನ ವಿಚಾರಣೆಯನ್ನು ಜೂನ್ 21 ಕ್ಕೆ ಮುಂದೂಡಲಾಗಿದ್ದು, ಅಂದು ಸಂಘಟನೆಗಳ ಕಾರ್ಯಕರ್ತರ ಭವಿಷ್ಯ ನಿರ್ಧಾರವಾಗಲಿದೆ.

Leave a Reply

Your email address will not be published. Required fields are marked *