Breaking
24 Sep 2026, Thu

ʼʼಯಾವತ್ತು ಪೊಲೀಸ್ ಇಲಾಖೆ ಪ್ರಭಾಕರ್ ಭಟ್ ಅವರ ಮೈ ಮುಟ್ಟುತ್ತದೋ ಅಂದು ಹಿಂದೂ ಸಮಾಜ ಧಂಗೆ ಏಳುತ್ತದೆʼʼ- ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು : ಯಾವತ್ತು ಪೊಲೀಸ್ ಇಲಾಖೆ ಪ್ರಭಾಕರ್ ಭಟ್ ಅವರ ಮೈ ಮುಟ್ಟುತ್ತದೋ ಅಂದು ಹಿಂದೂ ಸಮಾಜ ಧಂಗೆ ಏಳುತ್ತದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರಕ್ಕೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು “ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇಡೀ ದ.ಕ. ಜಿಲ್ಲೆಯ ಹಿಂದೂ ಸಮುದಾಯಕ್ಕೆ ಮಾರ್ಗದರ್ಶಕರು.

ಅವರ ಮೇಲೆ ವಿನಾಃಕಾರಣ ಪೊಲೀಸ್ ಇಲಾಖೆ ಕೇಸ್ ಹಾಕುತ್ತಿದೆ. ಅವರನ್ನ ಬಂಧಿಸಿ ಹಿಂದೂ ಸಮಾಜವನ್ನು ಸುಮ್ಮನೆ ಕೂರಿಸಬಹುದು ಎಂಬ ಅನಿಸಿಕೆ ಪೊಲೀಸ್ ಇಲಾಖೆ ಮತ್ತು ಸರ್ಕಾರದ್ದು. ಇದು ನೂರಕ್ಕೆ ನೂರು ಸಾಧ್ಯವಿಲ್ಲ. ಪ್ರಭಾಕರ್ ಭಟ್ರನ್ನು ಬಂಧಿಸಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *