Breaking
21 Jun 2026, Sun

ಚಾರ್ಮಾಡಿ ಘಾಟಿಯ 3ನೇ ತಿರುವಿನ ಬಳಿ ಹೆದ್ದಾರಿಗೆ ಉರುಳಿಬಿದ್ದ ಬೃಹತ್ ಗಾತ್ರದ ಮರ

ಚಿಕ್ಕಮಗಳೂರು: ಸುರಿದ ಭಾರೀ ಗಾಳಿಗೆ ಮರವೊಂದು ಹೆದ್ದಾರಿಗೆ ಉರುಳಿಬಿದ್ದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಜೂನ್.2ರಂದು ನಡೆದಿದೆ.

ಗಾಳಿಯ ಹೊಡೆತಕ್ಕೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನ ಬಳಿ ಈ ಬೃಹತ್ ಗಾತ್ರದ ಮರ ಬಿದ್ದಿದೆ.

ಪರಿಣಾಮ ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸುಮಾರು ಮೂರೂ ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸಂಚರಿಸಲು ಪರದಾಟ ನಡೆಸಿದರು.

ಜೆಸಿಬಿಯಿಂದ ಮರ ತೆರವು ಕಾರ್ಯ ನಡೆಯುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಪೊಲೀಸರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *