Breaking
22 Mar 2026, Sun

ನೆಲ್ಯಾಡಿ: ಚೂರಿ ಇರಿತ, ಯುವಕ ಸಾವು

ಪುತ್ತೂರು: ಚಾಕುವಿನಿಂದ ಇರಿದು ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಮೇ 09 ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ.

ಮೃತಪಟ್ಟ ಯುವಕ ಮಾದೇರಿ ನಿವಾಸಿ ಗಂಗಪ್ಪ ಗೌಡ ಎಂಬವರ ಪುತ್ರ ಶರತ್(35ವ.)ಎಂದು ತಿಳಿದುಬಂದಿದೆ.

ಕೌಟುಂಬಿಕ ಕಲಹದ ಕಾರಣದಿಂದಾಗಿ ಮನೆಯಂಗಳದಲ್ಲಿ ಶರತ್ ನನ್ನು ಚಾಕುವಿನಿಂದ ಇರಿದು ಕೊಲೆಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *