ನವದೆಹಲಿ : ಪಾಕಿಸ್ತಾನದ ವಿರುದ್ಧ ಭಾರತವು ಆಪರೇಷನ್ ಸಿಂಧೂರ್-2 ಕಾರ್ಯಾಚರಣೆ ಮುಂದುವರಿಸಿದೆ.
ಪಾಕಿಸ್ತಾನವು ಭಾರತದ 36 ನಗರಗಳನ್ನು ಟಾರ್ಗೆಟ್ ಮಾಡಿದ್ದು, 20 ನಗರಗಳ ಮೇಲೆ ಡ್ರೋನ್, ಶೆಲ್ ದಾಳಿ ನಡೆಯುಸುತ್ತಲೇ ಇದ್ದು, ದಾಳಿಯನ್ನು ಭಾರತೀಯ ಸೇನೆ ತಡೆಯುತ್ತಿದೆ.

ಪಾಕಿಸ್ತಾನದ ಲಾಹೋರ್ ನ ಸೇನೆಯ ಡಿಎಚ್ಎ ಬಳಿ ಸರಿಸುಮಾರು 2 ಗಂಟೆಗೆ ಭಾರಿ ಪ್ರಮಾಣದ ಸ್ಪೋಟದ ಶಬ್ಧ ಸಂಭವಿಸಿದ್ದು, ಸ್ವಲ್ಪ ಸಮಯದ ನಂತರ ಪಾಕಿಸ್ತಾನದ ವಾಯುಸೇನೆಯ ಏರ್ ಬೇಸ್ ಗಳಾದ ರಾವಲ್ಪಿಂಡಿಯ ನೂರ್ ಖಾನ್ ಏರ್ ಬೇಸ್ ಚಕ್ಲಾಲ, ಪಂಜಾಬ್ ಸೊರ್ಕೋಟ್ ನ ಪಿಎಎಫ್ ರಫೀಕ್ ಏರ್ ಬೇಸ್, ಪಿಎಎಫ್ ಮುರೀದ್ ಏರ್ ಬೇಸ್ ಚಕ್ವಾಲ ಪಂಜಾಬ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಬೆಳಗಿನ ಜಾವ ಪಾಕಿಸ್ತಾನದ ಮಿಸೈಲ್ ಜಮ್ಮುವಿನ ಜನವಸತಿ ಪ್ರದೇಶ ಉದಾಂಪುರದಲ್ಲಿ ಸ್ಪೋಟಗೊಂಡಿದೆ.
ಈ ಹಿನ್ನಲೆ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ 32 ವಿಮಾನ ನಿಲ್ದಾಣಗಳನ್ನು ಮೇ.15 ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.



