Breaking
9 Nov 2026, Mon

ಮೋದಿ, ಸ್ಮಿತ್ ಮಕ್ಚರ್, ಸಾಲುಮರದ ತಿಮ್ಮಕ್ಕರ ಚಿತ್ತಾರಗಳೊಂದಿಗೆ ಕಂಗೊಳಿಸಿದ ಬೃಹತ್ ಗೂಡು ದೀಪ!

ದೀಪಾವಳಿ ಬೆಳಕಿನ ಹಬ್ಬದ ಸಂಭ್ರಮದ ಅಂಗವಾಗಿ ಕಳೆದ ಎರಡು ವರ್ಷಗಳಿಂದ ವಿಭಿನ್ನ ವಿನ್ಯಾಸ ಹಾಗೂ ವಿಶಿಷ್ಟ ಚಿತ್ತಾರಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದ ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು ತಂಡದ ಬೃಹತ್ ಗೂಡು ದೀಪ ಈ ಬಾರಿಯೂ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿದೆ.

ಈ ವರ್ಷದ ಗೂಡು ದೀಪದಲ್ಲಿ ಹಲವು ವಿಶೇಷ ಸಂದೇಶಗಳನ್ನು ಸಾರುವ ಚಿತ್ರಣಗಳನ್ನು ಕಲಾತ್ಮಕವಾಗಿ ಮೂಡಿಸಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಮುಖ್ಯಮಂತ್ರಿಯಾಗಿ ಹಾಗೂ ಇದೀಗ ಪ್ರಧಾನಮಂತ್ರಿಯಾಗಿ ಸತತ 25 ವರ್ಷಗಳ ಆಡಳಿತ ಸೇವಾವಧಿಯನ್ನು ಪೂರೈಸಿದ ನರೇಂದ್ರ ಮೋದಿ ಅವರ ಚಿತ್ರಣ, ವಿಮಾನ ಹಾರಾಟದ ಸಂದರ್ಭದಲ್ಲಿ ಸಹ ಪೈಲಟ್‌ನಿಂದ ಎದುರಾದ ಅಪಾಯದ ನಡುವೆಯೂ ಧೈರ್ಯದಿಂದ ಹೋರಾಡಿ 184 ಪ್ರಯಾಣಿಕರ ಜೀವ ಉಳಿಸಿದ ಭಾರತದ ಹೆಮ್ಮೆಯ ಪುತ್ರ ಸ್ಮಿತ್ ಮಕ್ಚರ್ ಅವರ ಸಾಹಸಗಾಥೆ, ಪರಿಸರ ಸಂರಕ್ಷಣೆಯ ಸಂದೇಶ ಸಾರುವ ‘ಸಾಲುಮರದ ತಿಮ್ಮಕ್ಕ’ ಅವರ ಚಿತ್ರಣ ವಿಶೇಷ ಗಮನ ಸೆಳೆಯುತ್ತಿವೆ.

ಇದರೊಂದಿಗೆ ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ದೈವಾರಾಧನೆಯ ಮೂಲನಂಬಿಕೆಗಳನ್ನು ಉಳಿಸಿ ಬೆಳೆಸುವ ಆಶಯವನ್ನು ಬಿಂಬಿಸುವ ಸುಂದರ ಚಿತ್ತಾರಗಳನ್ನೂ ಗೂಡು ದೀಪದಲ್ಲಿ ಅಳವಡಿಸಲಾಗಿದೆ.

ಶ್ರೀ ಮಣಿಕಂಠ ಮಂದಿರದ ಕಲ್ಲುರ್ಟಿ ದೈವಸ್ಥಾನದ ಅಂಗಣದಲ್ಲಿ ರಾರಾಜಿಸುತ್ತಿರುವ ಈ ಬೃಹತ್ ಗೂಡು ದೀಪವು ದೇಶಭಕ್ತಿ, ಸಾಹಸ, ಪರಿಸರ ಪ್ರೇಮ ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂದೇಶಗಳನ್ನು ಒಂದೇ ವೇದಿಕೆಯಲ್ಲಿ ಸಾರುತ್ತಿದ್ದು, ಭಕ್ತರು ಹಾಗೂ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ.

Leave a Reply

Your email address will not be published. Required fields are marked *