Breaking
9 Nov 2026, Mon

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಲಕ್ಷ್ಯ ಡಿ. ಶೇ.70 ಅಂಕಗಳೊಂದಿಗೆ ತೇರ್ಗಡೆ

ಕಲ್ಲಡ್ಕ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾದ 2026ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ವೀರಕಂಭ ಗ್ರಾಮದ ಕೇಪುಲಕೋಡಿ ನಿವಾಸಿ ಲಕ್ಷ್ಯ ಡಿ. ಅವರು ಶೇ.70 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.


ಕೇಪುಲಕೋಡಿ ದೀಪಕ್ ಮತ್ತು ರಂಜಿತ ದಂಪತಿಯ ಪುತ್ರಿಯಾದ ಲಕ್ಷ್ಯ ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಡ್ಕದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ (ರಿ.), ಪುತ್ತೂರು ಇದರ ಸಹ ಸಂಸ್ಥೆಯಾದ ನೃತ್ಯ ಕಲ್ಪ, ಎರ್ಮೆ ಮಜಲ್‌ನ ನೃತ್ಯ ಗುರುಗಳಾದ ವಿದುಷಿ ಚೈತ್ರ ಪ್ರಜ್ವಲ್ ಶೆಟ್ಟಿ, ಮಂಗಳೂರು ಇವರ ಶಿಷ್ಯೆಯಾಗಿದ್ದಾರೆ.
ಲಕ್ಷ್ಯ ಅವರ ಈ ಸಾಧನೆಗೆ ಕುಟುಂಬಸ್ಥರು, ಶಾಲಾ ಶಿಕ್ಷಕರು ಹಾಗೂ ನೃತ್ಯ ಸಂಸ್ಥೆಯವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *