ಕಲ್ಲಡ್ಕ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾದ 2026ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಗೋಳ್ತಮಜಲಿನ ನಿಶ್ಮ ಎ.ಪಿ. ಅವರು ಶೇ. 92.25 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಗೋಳ್ತಮಜಲಿನ ಅಶೋಕ್ ಮತ್ತು ಜ್ಯೋತಿ ದಂಪತಿಯ ಪುತ್ರಿ. ಪ್ರಸ್ತುತ ಪುತ್ತೂರಿನ ಸುದಾನ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪುತ್ತೂರಿನ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ (ರಿ.) ಇದರ ಸಹ ಸಂಸ್ಥೆಯಾದ ಎರ್ಮೆ ಮಜಲಿನ ನೃತ್ಯ ಕಲ್ಪ ಸಂಸ್ಥೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು, ಮಂಗಳೂರಿನ ವಿದುಷಿ ಚೈತ್ರ ಪ್ರಜ್ವಲ್ ಶೆಟ್ಟಿ ಅವರ ಶಿಷ್ಯೆಯಾಗಿದ್ದಾರೆ.

ನಿಶ್ಮ ಅವರ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.



