ಮಂಡ್ಯ : ಪ್ರಧಾನಿ ಮೋದಿಯವರ ದಿಟ್ಟ ನಡೆಯಿಂದ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ಉಗ್ರರ ನೆಲೆ ಪಾಪಿ ಪಾಕಿಸ್ತಾನಕ್ಕೆ ಉತ್ತರವನ್ನು ಕೊಟ್ಟಿದೆ.
ಬಳಿಕ ಪಾಕ್ ಮತ್ತೆ ಮುಂದುವರಿದು ಗಡಿಯಲ್ಲಿ ಉದ್ಧಟತನವನ್ನು ತೋರಿದ್ದು ಆಪರೇಷನ್ ಸಿಂಧೂರ್ ಪಾರ್ಟ್ – 2 ಮೂಲಕ ಮುಟ್ಟಿ ನೋಡಿಕೊಳ್ಳುವಂತೆ ಸೇನೆ ಪ್ರತ್ಯುತ್ತರ ಕೊಡ್ತಾ ಇದೆ.
ಈ ನಿಟ್ಟಿನಲ್ಲಿ ನಮ್ಮ ದೇಶದ ವಿವಿಧ ಕಡೆಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ – ಪುನಸ್ಕಾರಗಳನ್ನು ನೆರವೇರಿಸಿ ಸೈನಿಕ ರಿಗೆ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಪ್ರಾರ್ಥನೆಯನ್ನು ಮಾಡಲಾಗುತ್ತಿದೆ.
ವಿಚಾರ ಹೀಗಿರುವಾಗಲೇ ಮಂಡ್ಯ ತಾಲೂಕಿನ ಕಿರುಗಾವಲು ಎಂಬಲ್ಲಿ ಜಾವಿದ್ ಪಾಷಾ ಅನ್ನುವ ಪಾಕ್ ಪ್ರೇಮಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೂಟ್ ಒರೆಸುತ್ತಿರುವ ರೀತಿ ವಿವಾದಾತ್ಮಕವಾಗಿ ಚಿತ್ರಕರಿಸಿರುವ ಪಾಕಿಸ್ತಾನ ಮೂಲದ ಫೋಟೋವನ್ನು ತನ್ನ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾನೆ.

ಈ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡಿದ್ದಾನೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಅಪಾಯಕಾರಿ ಅನ್ನುವ ಮಾತುಗಳು ಹರಿದಾಡುತ್ತಿದೆ.

ಇನ್ನು ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ.




