Breaking
21 Mar 2026, Sat

ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದೆ, ಆಗಲು ಸಾಧ್ಯವೇ – ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು : ನನಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದೆ. ಆದರೆ ಆಗಲು ಸಾಧ್ಯವೇ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿರುವ ನನ್ನ ವಿರುದ್ಧ ಕಾಂಗ್ರೇಸ್‌ನ ಕೆಲವು ದುಷ್ಟಕೂಟಗಳು ಕೆಲಸ ಮಾಡುತ್ತಿವೆ ಮತ್ತು ನಾನು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಗುವುದನ್ನು ಇದೇ ದುಷ್ಟಕೂಟ ತಪ್ಪಿಸಿತ್ತು ಎಂದು ಮಹಮ್ಮದ್ ಆಲಿ ಈ ಹಿಂದೆ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು ಕಾಂಗ್ರೇಸ್‌ನಲ್ಲಿ ಅಂತಹ ದುಷ್ಟಕೂಟಗಳಿಲ್ಲ.

ಮಹಮ್ಮದ್ ಆಲಿ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದಾರೆ.ಅವರಿಗೆ ರಾಜಕೀಯದಲ್ಲಿ ಭಾರೀ ಅನುಭವವೂ ಇದೆ. ಆದರೆ ಕೆಲವು ಸಂದರ್ಭಗಳಲ್ಲಿ ಹುದ್ದೆಗಳು ಸಿಗುತ್ತವೆ ಎನ್ನುವ ನಿರೀಕ್ಷೆ ಇರೋದು ಸಹಜ. ನನಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದೆ. ಆದರೆ ಆಗಲು ಸಾಧ್ಯವೇ. ಅದೇ ರೀತಿ ಕೆಲವೊಂದು ವಿಚಾರಗಳನ್ನು ಗಣನೆಗೆ ತೆಗೆದು ಹುದ್ದೆ ನೀಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಪುತ್ತೂರು ನಗರಸಭೆ ಯ ಪ್ರಮುಖ ಯೋಜನೆ ಯುಜಿಡಿಗೆ ರಿಯಲ್ ಎಸ್ಟೇಟ್ ಅಡ್ಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಎಚ್ ಮೊಹಮ್ಮದ್ ಆಲಿಯವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಶೋಕ್ ಕುಮಾರ್ ರೈಗಳು ಲೇ ಔಟ್‌ನಿಂದ ನಗರಸಭೆಗೆ ಲಾಭವೇ ಆಗಲಿದೆ. ಅದರಿಂದ ಏನು ತೊಂದರೆ ಇಲ್ಲ,ಇದರಲ್ಲಿ ರಿಯಲ್ ಎಸ್ಟೇಟ್ ನವರ ಪಾತ್ರ ಏನೂ ಇಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *