ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ

ಕಡಬ: ಹೆಸರಾಂತ ಕಬಡ್ಡಿ ಆಟಗಾರ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರೋ ಕಬಡ್ಡಿಯಲ್ಲಿ ಗಮನ ಸೆಳೆದಿದ್ದ ಕಡಬದ ಕೋಕಿಲಾನಂದ ಏ.24 ರಂದು ನಿಧನ ಹೊಂದಿದ್ದಾರೆ.

ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಡತನವಿದ್ದರೂ ಹೃದಯ ಶ್ರೀಮಂತಿಕೆ ಹೊಂದಿದ್ದ ಕೋಕಿಲಾನಂದ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ತಂದೆ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರೆ, ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ.

ಪತ್ನಿ ಪಂಚಾಯತ್ ನಲ್ಲಿ ವಾರಕ್ಕೆ ಮೂರು ಭಾರಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ಒಂದು ಮಗುವನ್ನು ಹೊಂದಿರುವ ಕೋಕಿಲಾನಂದ ಅವರ ಅಗಲುವಿಕೆಗೆ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *