ವಿಟ್ಲ: ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಧನ್ವಿ ಸಣ್ಣಗುತ್ತು ಅವರು RBKA ಕರ್ನಾಟಕ, ಕರಾಟೆ ಬುಡೋಕಾನ್ ಫೇಡರೇಷನ್ ಆಫ್ ಇಂಡಿಯಾ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 12 ವಯೋಮಾನ ವಿಭಾಗದ ಕುಮಿಟೆ ಮತ್ತು ಕಟಾ ಎರಡೂ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಮತ್ತು ಟ್ರೋಫಿ ಪಡೆದಿದ್ದಾರೆ.
ಇವರು ನೋಟರಿ ವಕೀಲರಾದ ಹಾಗೂ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಹಾಗೂ ಶ್ವೇತಾ ದಂಪತಿಗಳ ಪುತ್ರಿಯಾಗಿದ್ದು, ಕರಾಟೆ ಮಾಸ್ಟರ್ ಮಾಧವ ಸಿಂಹಮೂಲೆ ಅಳಿಕೆ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.