ವಿಟ್ಲ: ವಿಟ್ಲ ಜೆಸಿಐ ಘಟಕದ 2025 ಸಾಲಿನ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಠಲ ಜೇಸೀಸ್ ಶಾಲಾ ಜೇಸೀ ಪೆವಿಲಿಯನ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೇಸಿ ಸೆನೆಟರ್ ಪೂರ್ವ ವಲಯಾಧ್ಯಕ್ಷ ಮೋಹನ್ ಕೆ.ಎಸ್ ಜೇಸಿ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಪ್ರಯೋಗ ಶಾಲೆ. ಪದಾಧಿಕಾರಿಗಳಿಗೆ ಸಹಕಾರ ನೀಡಿದಾಗ ನೆನಪಿನಲ್ಲಿಟ್ಟುಕೊಳ್ಳುವ ಮಹತ್ಕಾರ್ಯ ಮಾಡಬಹುದು. ಪ್ರತಿಯೊಬ್ಬರೂ ಜೇಸಿ ಆಂದೋಲನದಲ್ಲಿ ಸಂಪೂರ್ಣ ತೊಡಗಿಸಿ ಕೊಳ್ಳ ಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ಗೀತಪ್ರಕಾಶ್ ಮಾತನಾಡಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಮಿಂಚುತ್ತಿದ್ದಾರೆ. ಮಹಿಳಾ ನಾಯಕತ್ವ ವಿಟ್ಲ ಜೇಸಿ ಸಂಸ್ಥೆಯನ್ನು ಪ್ರಜ್ವಲಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ವಿಟ್ಲ ಜೇಸಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.ಸೌಮ್ಯಾ ಚಂದ್ರಹಾಸ ಕೊಪ್ಪಳ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಪರಮೇಶ್ವರ್ ಹೆಗ್ಡೆ ಉಪಸ್ಥಿತರಿದ್ದರು.
ಹರ್ಷಿತ್ ನೂತನ ಅಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಕಾರ್ಯದರ್ಶಿ ಮುರಳಿ ಪ್ರಸಾದ್, ಲೇಡಿ ಕೋ-ಆರ್ಡಿನೇಟರ್ಸಿಂಧು ಶೆಟ್ಟಿ, ನೂತನ ಲೇಡಿ ಕೋ-ಆರ್ಡಿನೇಟರ್ ಅಶ್ವಿನಿ ದಿನೇಶ್, ವಿದ್ಯಾರ್ಥಿ ಜೇಸಿ ಅಧ್ಯಕ್ಷೆ ಸಾನ್ವಿ ಶೆಟ್ಟಿ, ನೂತನ ಅಧ್ಯಕ್ಷ ಶಾನ್ ಮೆಲ್ವಿನ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.ನೂತನ ಕಾರ್ಯದರ್ಶಿ ಹೇಮಲತಾ ಜೈಕಿಶನ್ ವಂದಿಸಿದರು.